ಒಂದೇ ದಿನ 210 ಮಂದಿಗೆ ಕೋವಿಡ್ ➤ ಬೆಳ್ತಂಗಡಿಯ ಕ್ರೈಸ್ತ ಆಶ್ರಮಕ್ಕೆ ವಿಎಚ್‍ಪಿ ನೆರವು

(ನ್ಯೂಸ್ ಕಡಬ) newskadaba,ಬೆಳ್ತಂಗಡಿ ಜೂ.01: ಒಂದೇ ದಿನ 210 ಮಂದಿಗೆ ಕೊರೊನಾ ಸೋಂಕು ತಗುಲುವ ಮೂಲಕ ಕೊರೊನಾ ಅಬ್ಬರದಿಂದ ನಲುಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೆರಿಯಾ ಸಿಯೋನ್ ಆಶ್ರಮಕ್ಕೆ ನೆರಿಯ ವಿಶ್ವ ಹಿಂದೂ ಪರಿಷತ್ ಘಟಕ ನೆರವಾಗಿದೆ.

ಸುಮಾರು 270 ಜನ ನಿರ್ಗತಿಕರು ಹಾಗೂ ವೃದ್ಧರಿರುವ ಈ ಆಶ್ರಮದಲ್ಲಿ ನಿನ್ನೆ ಬರೋಬ್ಬರಿ 210 ಮಂದಿಗೆಪಾಸಿಟಿವ್ ಆಗಿತ್ತು. ಹೀಗಾಗಿ ಇಂದು ವಿಎಚ್‍ಪಿ ಕಾರ್ಯಕರ್ತರು ಆಶ್ರಮವನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಿದ್ದಾರೆ. ಪಿಪಿಇ ಕಿಟ್ ಧರಿಸಿದ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಿಂದಲೇ ಆಶ್ರಮ, ಗೋಶಾಲೆಯನ್ನು ಸ್ಯಾನಿಟೈಸೇಷನ್ ಮಾಡಿದ್ದು, ಗೋವುಗಳ ಆಹಾರ ಆರೈಕೆಗೂ ವ್ಯವಸ್ಥೆ ಮಾಡಿದ್ದಾರೆ.ಯೋನ್ ಆಶ್ರಮ ಸಹಜ ಸ್ಥಿತಿಗೆ ಬರುವವರೆಗೂ ಈ ಸೇವೆ ಮುಂದುವರಿಯಲಿದೆ ಎಂದು ವಿಎಚ್‍ಪಿ ನೆರಿಯ ಘಟಕದ ಉಪಾಧ್ಯಕ್ಷ ದೀಕ್ಷಿತ್ ನೆರಿಯ ಹೇಳಿದ್ದಾರೆ.

Also Read  ಉಳ್ಳಾಲ: ಮಾ.25, 26 ರಂದು ನಿಂತುಹೋಗಿದ್ದ ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ

 

error: Content is protected !!
Scroll to Top