(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.01: ರಾಜ್ಯದಲ್ಲಿ ದಿನೇ ದಿನೇ ಬ್ಲ್ಯಾಕ್ ಫಂಗಸ್ಗೆ ಹೆಚ್ಚಿನ ಜನ ತುತ್ತಾಗುತ್ತಿದ್ದಾರೆ. ಅತಿಯಾದ ಮಧುಮೇಹವುಳ್ಳ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಪ್ಪು ಶಿಲೀಂಧ್ರಿ ಕಾಯಿಲೆ ಈಗ ಮಕ್ಕಳಲ್ಲೂ ಕಾಣಿಸಿಕೊಂಡಿದೆ.
ಬಳ್ಳಾರಿಯ 11 ವರ್ಷ ಬಾಲಕಿ ಹಾಗೂ ಚಿತ್ರದುರ್ಗದ 14 ವರ್ಷ ಬಾಲಕನಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಇಬ್ಬರೂ ಮಕ್ಕಳು ಒಂದು ಕಣ್ಣನಾದ್ರೂ ಕಳೆದುಕೊಳ್ಳುತ್ತಾರೆ ಎಂದು ವೈದ್ಯರು ತಿಳಿಸಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಬ್ಬರೂ ಮಕ್ಕಳಿಗೆ ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ಇಬ್ಬರು ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಬೇರೆಲ್ಲೂ ಮಕ್ಕಳಲ್ಲಿ ಫಂಗಸ್ ಕಾಣಿಸಿಕೊಂಡ ಪ್ರಕರಣಗಳು ವರದಿಯಾಗಿಲ್ಲ.