ಮಂಗಳೂರು: ನವೆಂಬರ್ 14 ರಿಂದ 18 ರವರೆಗೆ “ಪ್ರೇರಣಾ”ವಿಜ್ಞಾನ ವಿಷಯದ ಶಿಬಿರ ► ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಿ..

(ನ್ಯೂಸ್ ಕಡಬ) newskadaba.com ಮ0ಗಳೂರು, ಅ.25.(ಕರ್ನಾಟಕ ವಾರ್ತೆ): ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ “ಪ್ರೇರಣಾ” ವಿಜ್ಞಾನ ವಿಷಯದಲ್ಲಿ ಶಿಬಿರ(ವಸತಿ ಸಹಿತ)ವನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ  ಮೈಕ್ರೋಬಯಲಾಜಿ ವಿಭಾಗವು “ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಹೊಸದಿಲ್ಲಿ” ಇದರ ಪ್ರಾಯೋಜಕತ್ವದಲ್ಲಿ ನವೆಂಬರ್ 14 ರಿಂದ 18 ರ ವರೆಗೆ “ಪಿಲಿಕುಳ ವಿಜ್ಞಾನ ಕೆಂದ್ರ” ಮಂಗಳೂರು ಇಲ್ಲಿ  ನಡೆಸಲಿದೆ.

ಈ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಹಾಗೂ 200 ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗುವುದು. ಶಿಬಿರಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಪ್ರಥಮ ಅಥವಾ ದ್ವಿತೀಯ ಪಿ.ಯು.ಸಿ.(ವಿಜ್ಞಾನ ವಿಭಾಗ) ಯಲ್ಲಿ ಕಲಿಯುತ್ತಿರಬೇಕು ಹಾಗೂ ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 90.2% ಅಂಕಗಳಿಸಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 9. ಭಾಗವಹಿಸುವ ವಿದ್ಯಾರ್ಥಿಗಳು ನವೆಂಬರ್ 13 ರಂದು ಸಂಜೆ 4 ಗಂಟೆಗೆ ಮುಂಚಿತವಾಗಿ ಪಿಲಿಕುಳ ವಿಜ್ಞಾನ ಕೆಂದ್ರದಲ್ಲಿ ಹಾಜರಿರತಕ್ಕದ್ದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  ಡಾ.ಭಾರತಿ ಪ್ರಕಾಶ್, ಶಿಬಿರ ಸಂಯೋಜಕರು.9448625117.
ಕಚೇರಿ ದೂರವಾಣಿ ಸಂಖ್ಯೆ:0824-2424760.
error: Content is protected !!
Scroll to Top