ಮೊದಲ ಬಾರಿಗೆ ಗ್ರಾಮ ಪಂ. ಮಟ್ಟದಲ್ಲಿ ಸಿಎಂ ಸಂವಾದ ➤ ಸೋಂಕು ನಿಯಂತ್ರಿಸಲು ಇಂದು ಸಿಎಂ ಗ್ರಾಮ ಸಭೆ!

(ನ್ಯೂಸ್ ಕಡಬ) newskadaba,ಬೆಂಗಳೂರು ಮೇ.26: ಕೊರೋನಾ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯ ಹೆಚ್ಚಿಸಲು ಒಲವು ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ ಅವರು ಈ ಸಂಬಂಧ ಬುಧವಾರ ರಾಜ್ಯದ ವಿವಿಧ ಭಾಗಗಳ ಆಯ್ದ ಗ್ರಾಮಪಂಚಾಯಿಸಿ ಅಧ್ಯಕ್ಷರು ಹಾಗೂ ಪಿಡಿಒಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ.

 

 

ಇಂದು ಮಧ್ಯಾಹ್ನ 12.30ರ ಸುಮಾರಿಗೆ ಸಭೆ ನಡೆಸಲಿದೆ.ಇದೇ ಮೊದಲ ಬಾರಿಗೆ ನೇರವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂವಾದ ನಡೆಸಲು ನಿರ್ಧರಿಸಿದ್ದಾರೆ.ಈ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಕೋವಿಡ್ ತೀವ್ರತೆಯನ್ನು ಕಡಿಮೆಗೊಳಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.

Also Read  ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಮೊಬೈಲ್ ನಂಬರ್ ಹ್ಯಾಕ್ ➤‌ ಮೋಸ ಹೋಗದಂತೆ ಡಿಸಿ ಮನವಿ

 

error: Content is protected !!
Scroll to Top