(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.24. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮೇ ಮೊದಲ ವಾರದಲ್ಲೆ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಕಳೆದ ಬಾರಿಗಿಂತ ಮೂರು ದಿನ ಮೊದಲೇ ಚುನಾವಣಾ ನಡೆಸಲು ಆಯೋಗ ಎಲ್ಲಾ ರೀತಿಯ ತಯಾರಿ ನಡೆಸಿದ್ದು, ಮೇ 2, 2018ರಂದು ಚುನಾವಣೆ ನಡೆಯುವ ಸಾಧ್ಯತೆಯಿದೆ. ಏಪ್ರಿಲ್ ಅಂತ್ಯದೊಳಗೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಸೂಚನೆಯನ್ನು ಕೊಟ್ಟಿದೆ. 2018, ಮೇ 28ಕ್ಕೆ ರಾಜ್ಯ ಸರ್ಕಾರದ ಆಡಳಿತ ಅವಧಿ ಅಂತ್ಯವಾಗಲಿದ್ದು, ಅದಕ್ಕೂ ಮೊದಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ದತೆ ನಡೆಸಿದೆ.
ಸೋಮವಾರ ಶಿಕ್ಷಣ ಇಲಾಖೆಯೂ ಸಭೆ ನಡೆಸಿ ಚುನಾವಣೆ ವೇಳೆ ಪರೀಕ್ಷೆಗಳು ಎದುರಾಗದಂತೆ ಕ್ರಮವಹಿಸಲು ಚರ್ಚೆ ನಡೆಸಿದೆ. ಶಿಕ್ಷಕರು ಚುನಾವಣಾ ಕೆಲಸದಲ್ಲಿ ಭಾಗಿಯಾಗುವುದರಿಂದ ಪರೀಕ್ಷೆಗೆ ತೊಂದರೆಯಾಗದಂತೆ ಚುನಾವಣಾ ದಿನಾಂಕ ಪ್ರಕಟಿಸುವಂತೆ ಚುನಾವಣಾ ಆಯೋಗ ಕೋರಲು ಇದೇ ವೇಳೆ ನಿರ್ಧಾರ ಮಾಡಲಾಗಿದೆ.
ಕಳೆದ ಬಾರಿ 2013ರ ಮೇ 5 ರಂದು ಚುನಾವಣೆ ನಡೆದಿತ್ತು. ಈ ಬಾರಿ ಮೂರು ದಿನ ಮೊದಲೇ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚಾಗಿದೆ.