ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಜಿರಳೆ ಹಾಕಿದ್ದ ಪ್ರಕರಣ ► ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.23. ಕಳೆದ ಎರಡು ದಿನಗಳಿಂದ ಭಾರೀ ಸುದ್ದಿಯಾಗಿದ್ದ ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಲೆ ಸಿಕ್ಕ ಆರೋಪ ಶುದ್ಧ ಸುಳ್ಳು ಎಂಬುದು ಇದೀಗ ಬಹಿರಂಗವಾಗಿದೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿನ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಬಳಿಕ ಆರೋಪಿಗಳೇ ಉದ್ದೇಶಪೂರ್ವಕವಾಗಿ ಆಹಾರದಲ್ಲಿ ಜಿರಳೆ ಹಾಕಿರುವುದು ಕಂಡು ಬಂದಿದೆ.

ಆಟೋ ಡ್ರೈವರ್ ಆಗಿರುವ ಹೇಮಂತ್ ಮತ್ತು ದೇವರಾಜ್ ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯದ ನಿವಾಸಿಗಳಾದ ಈ ಇಬ್ಬರೂ ಪ್ರಚಾರಕ್ಕಾಗಿ ಉಪಹಾರದಲ್ಲಿ ಜಿರಳೆ ಹಾಕಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

Also Read  ಲೋ ವೋಲ್ಟೇಜ್ ಮತ್ತು ಅನಿಯಮಿತ ವಿದ್ಯುತ್ ಕಡಿತದ ವಿರುದ್ಧ ಆಕ್ರೋಶ ► ಬಿಜೆಪಿ ಸುಳ್ಯ ಮಂಡಲ ವತಿಯಿಂದ ನೆಲ್ಯಾಡಿ ಸಬ್ ಸ್ಟೇಶನ್ ಎದುರು ಪ್ರತಿಭಟನೆ

ಅಕ್ಟೋಬರ್ 20ರಂದು ರಾಜರಾಜೇಶ್ವರಿನಗರದ ಕೊಟ್ಟಿಗೆಪಾಳ್ಯದ ಇಂದಿರಾ ಕ್ಯಾಂಟೀನ್‍ನಲ್ಲಿ ಒಂದೇ ದಿನದಲ್ಲಿ ರೈಸ್‍ಬಾತ್‍ನಲ್ಲಿ ಎರಡೆರೆಡು ಜಿರಳೆ ಸಿಕ್ಕಿತ್ತು. ಜಿರಲೆ ಸಿಕ್ಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಸಂಬಂಧ ಬಿಬಿಎಂಪಿ ಮೇಯರ್ ಸಂಪತ್ ಕುಮಾರ್ ಪ್ರತಿಕ್ರಿಯಿಸಿ, ಇಂದಿರಾ ಕ್ಯಾಂಟೀನ್ ಹೆಸರು ಹಾಳು ಮಾಡುವ ಉದ್ದೇಶದಿಂದಲೇ ಜಿರಳೆ ರಾಮಾಯಣ ಸೃಷ್ಟಿಸಿದ್ದಾರೆ. ಈ ಕುರಿತು ತನಿಖೆಯನ್ನು ನಡೆಸಿ ಸತ್ಯಾಂಶವನ್ನು ಹೊರತರುತ್ತೇವೆ ಎಂದು ತಿಳಿಸಿದ್ದರು.

 

error: Content is protected !!
Scroll to Top