ಕಡಬ ಅಂಗಡಿ ಮನೆ ಕಾಲೋನಿ ► ಸಾಮೂಹಿಕ ಗೋಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಅ.23. ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಅಂಗಡಿ ಮನೆ ಕಾಲೋನಿಯಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು.


ಅಂಗಡಿ ಮನೆ ಕಾಲೋನಿ ಮಹಿಳೆಯರು ಪೂಜೆಯನ್ನು ನೆರವೇರಿಸಿದರು. ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಗೋಪೂಜೆ ಮಹತ್ವದ ಬಗ್ಗೆ ತಿಳಿಸಿದರು.

ಈ ಸಂದರ್ಭ ಹಿಂಜಾವೇ ಮುಖಂಡ ರವಿರಾಜ್ ಶೆಟ್ಟಿ, ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ವಿಶ್ವಹಿಂದೂ ಪರಿಷದ್ ಮುಖಂಡ ಜನಾರ್ದನ ರಾವ್, ಬಜರಂಗದಳ ಮುಖಂಡರಾದ ಸಂತೋಷ್ ಸುವರ್ಣ , ಮೂಲಚಂದ್ರ, ಪ್ರಮುಖರಾದ ಸುರೇಶ್ ಎನ್, ಪ್ರಮೋದ್ ರೈ, ರಘುರಾಮ್ ನಾೖಕ್ ಮತ್ತಿತರರು ಇದ್ದರು.

Also Read  ವಿದ್ಯುತ್ ಮಾರ್ಗದ ತುರ್ತು ಕಾಮಗಾರಿಯ ಹಿನ್ನೆಲೆ ➤ ನಾಳೆ ಕಡಬ, ಸುಬ್ರಹ್ಮಣ್ಯ, ಸವಣೂರು, ನೆಲ್ಯಾಡಿ ಪರಿಸರದಲ್ಲಿ ವಿದ್ಯುತ್ ನಿಲುಗಡೆ

 

error: Content is protected !!
Scroll to Top