ತುಳುನಾಡಿನ ಸಂಪ್ರದಾಯದ ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗುವಂತಿದೆ ► ಚಂದ್ರಹಾಸ ರೈ

(ನ್ಯೂಸ್ ಕಡಬ) newskadaba.com ಕಡಬ, ಅ.23. ನೂಜಿಬಾಳ್ತಿಲ-ರೆಂಜಿಲಾಡಿ ಶ್ರೀನೂಜಿ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ನೂಜಿಬೈಲ್ ತೆಗೆರ್ ತುಳುಕೂಟ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದಿ.ಚಿನ್ನಪ್ಪ ಗೌಡ ಮಾರಪ್ಪೆರವರ ಸ್ಮರಣಾರ್ಥವಾಗಿ ಬೆನ್ನಿದ ಕಂಡೊಡ್ ನಮ್ಮ ಜವನೆರ್ ತುಳು ಸಂಸ್ಕ್ರತಿ ಉಳಿಸುವ ತುಳುಕ್ರೀಡೋತ್ಸವ ಆದಿತ್ಯವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ನಮ್ಮ ತುಳುನಾಡಿನ ಸಂಪ್ರದಾಯದಂತೆ ಒಬ್ಬ ನೆಂಟಸ್ತಿಕನಾಗಿ ಬಂದವನಿಗೆ ಅವನು ನಮ್ಮ ಮನೆಯನ್ನು ಪ್ರವೇಶಿಸಿದಲ್ಲಿಂದ ಅವನು ತೆರಳುವ ತನಕ ನಮ್ಮ ಸಂಪ್ರದಾಯ ಬದ್ಧ ನಡತೆ, ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗುವಂತಿದೆ. ಇಂತಹ ಸಂಸ್ಕಾರ ಸಂಸ್ಕ್ರತಿಯೊಳ್ಳ ನಮ್ಮ ಕರಾವಳಿ ಭಾಗದಲ್ಲಿ ಇಂತಹ ಗ್ರಾಮೀಣ ಆಟೋಟ ಸ್ಪರ್ಧೆಗಳು ಕಂಬಳ ಜಾತ್ರೆ, ಉತ್ಸವ, ಹಬ್ಬಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿರುವುದಲ್ಲದೆ ಅದು ಮರೆಯಲಾಗದ ರೀತಿಯಲ್ಲಿ ಇರುತ್ತದೆ ಎಂದು ಹೇಳಿದರು.

Also Read  ಉಡುಪಿ: ಅಪರೂಪದ ಹಾರುವ ಹಾವು ಪತ್ತೆ


ಪ್ರಗತಿಪರ ಕೃಷಿಕರೂ, ಉದ್ಯಮಿ ಮೃತ್ಯುಂಜಯ ಭಿಡೆ ಕೆರೆ ತೋಟರವರು ದೀಪಬೆಳಗಿಸಿ ಕಳಸೆಗೆ ಭತ್ತ ಹಾಕಿ ದೀಪ ಬೆಳಗಿಸಿ ತೆಂಗಿನ ಪಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಎಲುವಾಳೆ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಹೆಬ್ಬಾರ್, ಶ್ರೀಧರ ಆರಿಗ ನೂಜಿಗುತ್ತು, ಲಿಂಗಪ್ಪ ಗೌಡ ಕೇಪುಂಜ, ದೈವಸ್ಥಾನದ ಪ್ರಧಾನ ಪರಿಚಾರಕ ಯಶೋಧರ ಗೌಡ ಮಾರಪ್ಪೆ, ದೇರಣ್ಣ ಗೌಡ ಗೌಡಿಗೆ, ತೆಗೆರ್ ತುಳುಕೂಟ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಮ್, ಉಪಸ್ಥಿತರಿದ್ದರು.

ತೆಗೆರ್ ತುಳುಕೂಟದ ಅಧ್ಯಕ್ಷ ವಾಸುದೇವ ಗೌಡ ಕೇಪುಂಜ, ಸ್ವಾಗತಿಸಿ, ಜಯಂತ ಬರೆಮೇಲು, ವಂದಿಸಿದರು. ಸಿ.ಆರ್.ಪಿ. ಗಣೇಶ್ ನಡುವಾಳ, ಹಾಗೂ ಹರ್ಷಿತ್ ನಡುವಳಿಕೆ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಲತಾ ಕೇಪುಂಜ, ಸಹಕರಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಾರೀರಿಕ ಶಿಕ್ಷಕ ಬಾಲಕೃಷ್ಣ ಎಂ. ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

error: Content is protected !!
Scroll to Top