ಅಕ್ಟೋಬರ್ 27ರಂದು ಕಡಬದಲ್ಲಿ ► ಮರಳು ನೀತಿಯ ವಿರುದ್ಧ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.23.  ಜಿಲ್ಲಾಡಳಿತವು ಮರಳು ನೀತಿಯನ್ನು ಸಡಿಲಗೊಳಿಸಿ ಎಲ್ಲಾ ವರ್ಗದ ಜನತೆಗೆ ಅನುಕೂಲ ಮಾಡಿಕೊಡಬೇಕು. ತಪ್ಪಿದಲ್ಲಿ ಇದರ ವಿರುದ್ಧ ಅ. 27 ರಂದು ಕಡಬ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಎಚ್ಚರಿಸಿದರು.

ಕಡಬ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮರಳು ನೀತಿಯಿಂದ ಜನರಿಗೆ ಆಗುತ್ತಿರುವ ಸಂಕಷ್ಟಗಳನ್ನು ನಿವಾರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುತುರ್ವಜಿ ವಹಿಸಬೇಕೆಂದು ಆಗ್ರಹಿಸಿದರು. ಕಡಬ ತಾಲೂಕಿನಾದ್ಯಂತ ನೈರ್ಸಗಿಕ ಮರಳಿನ ಅಭಾವ ಉಂಟಾಗಿದ್ದು ಸಾರ್ವಜನಿಕರು ಕಟ್ಟಡ, ಮನೆ, ವಾಣಿಜ್ಯ ಕಟ್ಟಡ ನಿರ್ಮಿಸಲು ಪರದಾಡುವಂತಾಗಿದೆ. ಬಡವರಿಗಾಗಿ ಗ್ರಾಮ ಪಂಚಾಯತ್ನಿಂದ ಮಂಜೂರಾದ ಮನೆಗಳು, ಕಾಂಕ್ರೀಟೀಕರಣಗೊಳ್ಳುವಂತಹ ಮೋರಿ ಹಾಗೂ ರಸ್ತೆಗಳು ಮರಳಿಲ್ಲದೆ ಕಾಮಗಾರಿ ಸ್ಥಗಿತವಾಗಿದೆ. ಸೂಕ್ತ ಮರಳು ನೀತಿ ಇಲ್ಲದ ಕಾರಣ ಬಡವರು ಸಣ್ಣ ಪುಟ್ಟ ವಾಹನಗಳಲ್ಲಿ ಸಣ್ಣ ಪುಟ್ಟ ವಾಹನಗಳಲ್ಲಿ ಮರಳು ಸಾಗಿಸುವುದಕ್ಕೆ ಅಧಿಕಾರಿಗಳು ತಡೆ ಉಂಟು ಮಾಡಿ ಹಣ ಮಾಡುವ ದಂಧೆ ನಡೆಸುತ್ತಿದ್ದಾರೆ. ಈಗಿರುವ ಅವೈಜ್ಙಾನಿಕ ಮರಳು ನೀತಿಯಿಂದ ನದಿ, ತೋಡು, ಹಳ್ಳ ಕೊಳ್ಳಗಳಲ್ಲಿ ಮರಳು ಸಂಗ್ರಹಿಸಿ ಜೋರಾದ ಮಳೆಯಾದಾಗ ನೆರೆ ನೀರು ಕೃಷಿ ತೋಟಗಳಿಗೆ ನುಗ್ಗಿ ಹಾನಿ ಉಂಟಾಗುತ್ತಿದೆ. ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗಿದ್ದು, ಗ್ರಾಮೀಣ ಭಾಗವಾದ ಇಲ್ಲಿ ಅನುಮತಿ ನೀಡದಿರುವುದು ಸರ್ಕಾರದ ತಾರತಮ್ಯ ನೀತಿಯನ್ನು ತೋರಿಸುತ್ತದೆ. ಇದರಿಂದಾಗಿ ಕಡಬದಂತಹ ಗ್ರಾಮೀಣ ಪ್ರದೇಶದÀಲ್ಲಿ ದುಬಾರಿ ಬೆಲೆ ತೆತ್ತು ಮರಳು ಪಡೆಯಬೇಕಾಗಿದೆ. ಆದ್ದರಿಂದ ಬಹುತೇಕ ಕಡೆ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು ಅನೇಕ ಕೂಲಿ ಕಾರ್ಮಿಕರು ಅತಂತ್ರವಾಗಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಕಡಬ ಭಾಗದಲ್ಲಿ ಘನ ವಾಹನ ಹೊರತು ಪಡಿಸಿ ಸಣ್ಣ ಪುಟ್ಟ ವಾಹನಗಳಲ್ಲಿ ಮರಳು ಸಾಗಿಸಲು ಅವಕಾಶ ಕಲ್ಪಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು , ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಸೈಯದ್ ಮೀರಾ ಸಾಹೇಬ್ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅಕ್ಟೋಬರ್ 27ರಂದು ಕಡಬ ತಾಲೂಕು ಕಚೇರಿ ಮುಂಭಾಗದಲ್ಲಿ ಎಲ್ಲಾ ಕಾರ್ಮಿಕರ ವಲಯ ಹಾಗೂ ಸಾರ್ವಜನಿಕರನ್ನು ಸೇರಿಸಿಕೊಂಡು ಉಗ್ರ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

Also Read  ಬಲ್ಯ: ಕೆರೆಗೆ ಬಿದ್ದು ಯುವತಿ ಮೃತ್ಯು


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಶೇಖರ ಕೋಡಿಬೈಲು, ಹರೀಶ್ ರೈ ನಡುಮಜಲು, ಉದ್ಯಮಿ ತೋಮ್ಸ್‌ನ್ ಕೆ.ಟಿ., ರಾಜು ಕೆ.ಎಸ್, ವಿಕ್ಟರ್ ಮಾರ್ಟಿಸ್, ಪ್ರಭಾಕರ ಪದಕ, ರವಿ ಪಾದೆರೆ, ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top