ಚಾಲಕನ ನಿಯಂತ್ರಣ ತಪ್ಪಿದ ಟೈಲ್ಸ್ ಲಾರಿ ► 11 ಜನರ ಮೃತ್ಯು, ಐವರು ಗಂಭೀರ

(ನ್ಯೂಸ್ ಕಡಬ) newskadaba.com ವಿಜಯಪುರ, ಅ.21. ಟೈಲ್ಸ್ ಲಾರಿ ಪಲ್ಟಿಯಾಗಿ 11 ಜನ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ಹೊರವಲಯದ ಸಾಂಗ್ಲಿಯ ಟಸ್ಗಾನ್-ಕವಾಥೆ ಮಹನ್ಕಾಲ್ ರಸ್ತೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಮೃತ ದುರ್ದೈವಿಗಳನ್ನು ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಇಂದಿರಾಬಾಯಿ ನಿಂಬಾಳಕರ (30), ಪರಶುರಾಮ ಪೂಜಾರಿ (30), ಬಸಮ್ಮ ಪೂಜಾರಿ (25), ರೂಪೇಶ್ (25), ಸಂತೋಷ (19), ಅಶೋಕ್ ಬಿರಾದಾರ (50), ಲಕ್ಷ್ಮಿ ಬಾಯಿ ಮಾದರ (30), ಲಕ್ಷ್ಮಣ ಮಾದರ (30), ಬೇಬಿ ಶೆಖ್ (49) ಸಾಹೇಬಣ್ಣ (65) ಹಾಗೂ ನಾಗಪ್ಪ ನಿಂಬಾಳಕರ(8) ಎಂದು ಗುರುತಿಸಲಾಗಿದೆ.

Also Read  ರೈತರಿಗೆ ಸಮಗ್ರ ಮಾಹಿತಿ ಒದಗಿಸುವ ಪ್ರಚಾರ ವಾಹನಕ್ಕೆ ಚಾಲನೆ

ಚಾಲಕನ ನಿಯಂತ್ರಣ ತಪ್ಪಿದ ಟೈಲ್ಸ್ ಲಾರಿ ಮನೆರಾಜುರಿ ಗ್ರಾಮದ ಸಮೀಪ ಪಲ್ಟಿ ಹೊಡೆದಿದ್ದು, ಟೈಲ್ಸ್ ಕೆಳಗೆ ಕಾರ್ಮಿಕರು ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ರಕ್ಷಣೆ ಮಾಡಿ ಸಮೀಪದ ಮೀರಜ್ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಾಂಗ್ಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top