ಸಬಳೂರು: ಶ್ರೀ ರಾಮ ಭಜನಾ ಮಂದಿರ ► ದೀಪಾವಳಿ ಸಂಭ್ರಮ, ಸಾಮೂಹಿಕ ಗೋಪೂಜೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.18. ಪುತ್ತೂರು ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾ ನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಕಳೆದ 10 ವರ್ಷಗಳಿಂದ ದೀಪಾವಳಿ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದ್ದು, ಈ ವರ್ಷವೂ 11ನೇ ವರ್ಷದ ದೀಪಾವಳಿ ಆಚರಣೆಯನ್ನು ಮಂಗಳವಾರ ಆಚರಿಸಲಾಯಿತು.

ಸಬಳೂರು ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಅಯೋಧ್ಯಾ ನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಅಯೋಜಿಸಲಾದ 11ನೇ ವರ್ಷದ ದೀಪಾವಳಿ ಕ್ರೀಡಾಕೂಟಕ್ಕೆ ಜೇಸಿಐ ಮುಖಂಡ ಪ್ರಶಾಂತ್ ರೈ ಸಬಳೂರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪ್ರಶಾಂತ್ ರೈ ಅವರು ಸಾಮೂಹಿಕ ಆಚರಣೆಯು ಒಗ್ಗಟ್ಟಿಗೆ ಕಾರಣವಾಗುತ್ತದೆ. ಗೋಪೂಜೆ ನಮ್ಮ ಹಿಂದೂ ಸಂಸ್ಕ್ರತಿಯ ಪ್ರತಿಕ. ಹಾಗಾಗಿ ಸಾಮೂಹಿಕ ಪೂಜೆ ನಡೆಸುವುದು ನಮ್ಮ ಪೀಳಿಗೆಗೆ ಪರಿಚಯಿಸದಂತಾಗುತ್ತದೆ ಎಂದು ಹೇಳಿದರು.

Also Read  ಪರಿಸರದ ಸ್ವಚ್ಚತೆ ಕಾಪಾಡಿ ➤ ಡಾ| ಚೂಂತಾರು

ಈ ವೇಳೆ ಶಿಕ್ಷಕ ವೈ ಶಾಂತಪ್ಪ ಗೌಡ, ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ, ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಉಪಸ್ಥಿತರಿದ್ದರು.

ಬಳಿಕ ಸಾಮೂಹಿಕ ಗೋಪೂಜೆಯ ವ್ಯೆದಿಕ ಕಾರ್ಯಕ್ರಮವನ್ನು ಅರ್ಚಕ ವೆಂಕಟ್ರಮಣ ಕುದ್ರೆತ್ತಾಯ ನೆರವೇರಿಸಿದರು.

error: Content is protected !!
Scroll to Top