ವಿದ್ಯುತ್ ಕಂಬ ಬಿದ್ದು ಮೃತಪಟ್ಟ ಯುವಕನ ಕುಟುಂಬಕ್ಕೆ ► ಮೆಸ್ಕಾಂ ಇಲಾಖೆಯಿಂದ ಪರಿಹಾರ ಚೆಕ್ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಅ.18. ಕೊಂಬಾರು ಗ್ರಾಮದ 16 ಸಿ.ಆರ್.ಸಿ ಕಾಲೋನಿಯ ವಾಸುದೇವರವರ ಪುತ್ರ ಮನೋಹರ (19ವ) ಕುಟುಂಬಕ್ಕೆ ಮೆಸ್ಕಾಂ ಇಲಾಖೆಯಿಂದ ರೂ.1 ಲಕ್ಷ ಪರಿಹಾರದ ಚೆಕ್ಕನ್ನು ಮಂಗಳವಾರ ಕಡಬ ಮೆಸ್ಕಾಂ ಕಚೇರಿಯಲ್ಲಿ ವಿತರಿಸಲಾಯಿತು.

ಕಳೆದ ಫೆ.16ರಂದು ಕೊಂಬಾರಿನಿಂದ ಕಡಬಕ್ಕೆ ಬೈಕ್ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ  ಮನೋಹರ ಅವರ ಮೇಲೆ ವಿದ್ಯುತ್ ಕಂಬ ಬಿದ್ದು ಮೃತಪಟ್ಟಿದ್ದರು.

ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ಮೃತರ ತಂದೆ ವಾಸುದೇವ, ತಾಯಿ ಧನಮ್ಮ ರವರಿಗೆ ಚೆಕ್ಕನ್ನು ಹಸ್ತಾಂತರಿಸಿ ಮಾತನಾಡಿ ಕಳೆದ ಫೆ.16 ರಂದು ಕೊಂಬಾರಿನಿಂದ ಕಡಬಕ್ಕೆ ಬೈಕ್ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಅಕಸ್ಮಾತ್ ಗಾಳಿ ಮಳೆಗೆ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಕಂಬ ಪ್ರಯಾಣಿಕ ಮನೋಹರನ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಅಕಸ್ಮಾತ್ ಮೃತಪಟ್ಟ ಯುವಕನ ಕುಟುಂಬಸ್ಥರಿಗೆ ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯಿಂದ ಪರಿಹಾರವನ್ನು ನೀಡಲಾಗಿದ್ದು ಅವರ ಸಂಕಷ್ಟಕ್ಕೆ ಕಿಂಚಿತ್ತು ಸಹಕಾರವಾಗಲಿ ಎಂದು ಹೇಳಿದ ಅವರು ಈ ಪರಿಹಾರಕ್ಕಾಗಿ ಇಲಾಖೆಯಲ್ಲಿ ತುಂಬಾ ಒತ್ತಡ ತರಲಾಗಿದೆ ಎಂದರು.

Also Read  ಮಂಗಳೂರು : ಆತಂಕ ಸೃಷ್ಟಿಸಿದ ತುರಾಯಾ ಸ್ಯಾಟಲೈಟ್ ಫೋನ್​ಗಳ ಸಂಭಾಷಣೆ


ಈ ಸಂದರ್ಭದಲ್ಲಿ ಬಿಳಿನೆಲೆ ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯ , ಕಡಬ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕಡಬ ಜೆಇ ನಾಗರಾಜ್, ಮೆಸ್ಕಾಂ ಸಲಹಾ ಸಮಿತಿ ಮತ್ತು ಪುತ್ತೂರು ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾದ ರಾಮಕೃಷ್ಣ ಹೊಳ್ಳಾರು, ಪ್ರಮುಖರಾದ ಸತೀಶ್ ನಾೖಕ್, ಸೆಲ್ವ ಕುಮಾರ್ ಕೊಂಬಾರು, ಮೃತನ ಸಹೋದರ ಅಚ್ಚುತನಂದನ್ ಉಪಸ್ಥಿತರಿದ್ದರು.

error: Content is protected !!
Scroll to Top