ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ಮರು ಡಾಮರೀಕರಣ ► ನಬಾರ್ಡ್‌ನಿಂದ 49 ಲಕ್ಷ ರೂ.ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಅ.17. ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಮೇರೆಗೆ ಕೊೖಲ ಗ್ರಾಮದ ಏಣಿತ್ತಡ್ಕ ಜಿ.ಪಂ.ರಸ್ತೆಯಲ್ಲಿ ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕ ಮರು ಡಾಮರೀಕರಣಕ್ಕೆ ರಾಮಕುಂಜ ಗ್ರಾ.ಪಂ.ಸದಸ್ಯರಾದ ಯತೀಶ್ ಬಾನಡ್ಕರವರ ಮುತುವರ್ಜಿಯಿಂದಾಗಿ ನಬಾರ್ಡ್‌ನಿಂದ 49 ಲಕ್ಷ ರೂ.ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ ತಿಳಿಸಿದ್ದಾರೆ.

ರಾಜೀವಗಾಂಧಿ ವಿವಿ ನಿರ್ದೇಶಕ ಡಾ.ರಘು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಶಿಫಾರಸ್ಸಿನ ಮೇರೆಗೆ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್‌ರವರ ಸೂಚನೆ ಮೇರೆಗೆ ನಬಾರ್ಡ್‌ನಿಂದ 49 ಲಕ್ಷ ರೂ.ಬಿಡುಗಡೆಗೊಂಡಿದೆ.

Also Read  ಆಯುಷ್ ನೂತನ ಯೋಜನೆಗಳಿಗೆ ಚಾಲನೆ

ಈ ಅನುದಾನ ಬಿಡುಗಡೆಗೊಳಿಸುವಲ್ಲಿ ರಾಮಕುಂಜ ಗ್ರಾ.ಪಂ.ಸದಸ್ಯ, ಕಡಬ ಬ್ಲಾಕ್ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷರೂ ಆದ ಯತೀಶ್ ಬಾನಡ್ಕರವರು ಹೆಚ್ಚಿನ ಮುತುವರ್ಜಿ ವಹಿಸಿದ್ದರು.

 

error: Content is protected !!
Scroll to Top