ಕಡಬ: ಮಾದರಿ ಹಿ.ಪ್ರಾ.ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

 (ನ್ಯೂಸ್ ಕಡಬ) newskadaba.com ಕಡಬ, ಅ.17. ಇಲ್ಲಿನ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಡಬ ಎ ಮತ್ತು ಬಿ ಒಕ್ಕೂಟ ಹಾಗೂ ಶಾಲಾಭಿವೃದ್ದಿ ಸಮಿತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಕಡಬ ಗ್ರಾ.ಪಂ.ಸದಸ್ಯೆ ಶಾಲಿನಿ ಸತೀಶ್ ನಾೖಕ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೃಷ್ಣ ಬಿ, ಶ್ರೀಕ್ಷೇ.ಧ.ಗ್ರಾ.ಯೋ. ಎ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ, ಬಿ ಒಕ್ಕೂಟದ ಅಧ್ಯಕ್ಷ ಆನಂದ ಗೌಡ ಕೊಂಕ್ಯಾಡಿ, ಉಪಾಧ್ಯಕ್ಷರಾದ ಕೃಷ್ಣಪ್ಪ ಗೌಡ, ಜಯಾನಂದ ಗೌಡ, ಪ್ರಭಾಕರ ಕೆ.ಎಸ್, ಕೊರಗಪ್ಪ ಗೌಡ, ಶೇಖರ ಅರ್ಪಜೆ, ಲಕ್ಷ್ಮೀಶ ಬಂಗೇರ, ಸೇವಾಪ್ರತಿನಿಧಿಗಳಾದ ಪುಷ್ಪಾ, ಜಯಲಕ್ಷ್ಮೀ, ಸುಗುಣ, ರಾಮಣ್ಣ ಗೌಡ, ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿ ಶಾಲಾ ಪರಿಸರವನ್ನು ಸ್ವಚ್ಚಗೊಳಿಸಿದರು. ಮಾದರಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿ, ಸಹಶಿಕ್ಷಕಿ ತೀರ್ಥಾವತಿ ವಂದಿಸಿದರು.

error: Content is protected !!

Join the Group

Join WhatsApp Group