ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಮದುವೆ ವಿವರ ಹಾಕಿ ► 11.39 ಲಕ್ಷ ರೂ. ಕಳೆದುಕೊಂಡ ಮುಲ್ಕಿಯ ವ್ಯಕ್ತಿ..!!!

(ನ್ಯೂಸ್ ಕಡಬ) newskadaba.com ಮಂಗಳೂರು, ಅ.17. ಫಾರಿನ್ ಹುಡುಗಿಯನ್ನು ಮದುವೆಯಾಗುವ ಆಸೆಯಿಂದ ವ್ಯಕ್ತಿಯೋರ್ವರು ತನ್ನ ಮದುವೆಯ ಕುರಿತು ಕನ್ನಡ ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ವಿವರ ಹಾಕಿದ ಬಳಿಕ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡ ಘಟನೆ ಮುಲ್ಕಿಯಲ್ಲಿ ನಡೆದಿದೆ.

ವಿದೇಶಿ ಯುವತಿಯ ಜಾಲದಲ್ಲಿ ಬಿದ್ದ ಯುವಕ ಈಗ ಸರಿ ಸುಮಾರು 11.39 ಲಕ್ಷ ರೂಪಾಯಿ ಕಳೆದು ಕೊಂಡಿದ್ದಾನೆ.

ಸಿಂಗಾಪುರದಲ್ಲಿ ಉದ್ಯೋಗದಲ್ಲಿದ್ದ ಮುಲ್ಕಿಯ ಯುವಕನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಕೆಲವು ಸಮಯದ ಹಿಂದೆ ಹೆಂಡತಿಗೆ ಡೈವೋರ್ಸ್ ನೀಡಿದ್ದ. ಎರಡನೇ ಮದುವೆಗೋಸ್ಕರ ಈತ 2017 ರ ಜೂನ್ ನಲ್ಲಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ತನ್ನ ವಿವರ ಸಲ್ಲಿಸಿದ್ದ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿರುವ ಯುವಕನ ವಿವರಕ್ಕೆ ಇಂಗ್ಲೆಂಡ್ ನ ಸ್ಟೆಲ್ಲಾ ಮಾರೀಸ್ ಎಂಬ ಯುವತಿ ಪ್ರತಿಕ್ರಿಯಿಸಿದ್ದಳು.

ಈ ಹಿನ್ನೆಲೆಯಲ್ಲಿ ಮೂಲ್ಕಿಯ ಯುವಕನ ಮೊಬೈಲ್ ಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಿದ ಇಂಗ್ಲೆಂಡ್ ಸ್ಟೆಲ್ಲಾ, ಇಂಗ್ಲೆಂಡಿಗೆ ಬರುವಂತೆ ಯುವಕನನ್ನು ಆಹ್ವಾನಿಸಿದ್ದಳು. ಹಾಗೂ ಭಾರತದಲ್ಲಿರುವ ಮೈಕಲ್ ಅಂಟೋನಿ ಎಂಬುವರು ಪರಿಚಯ ನೀಡಿ ಮೊಬೈಲ್ ಸಂಖ್ಯೆಯನ್ನು ಸ್ಟೆಲ್ಲಾ ನೀಡಿದ್ದಳು. ಮುಲ್ಕಿಯ ಯುವಕ ಮೈಕಲ್ ಅಂಟೋನಿಯನ್ನು ಸಂಪರ್ಕಿಸಿದಾಗ ವೀಸಾ ವೆಚ್ಚ 26,560 ರೂಪಾಯಿ ಕಳಿಸುವಂತೆ ಸೂಚನೆ ನೀಡಿದ್ದ. ಅದರಂತೆ ಮಂಗಳೂರು ಹೊರವಲಯದ ಕಿನ್ನಿಗೋಳಿಯ ಬ್ಯಾಂಕ್ ವೊಂದರ ತನ್ನ ಖಾತೆಯಿಂದ ಯುವಕ ನೆಫ್ಟ್ ಮೂಲಕ ಹಣ ಕಳುಹಿಸಿದ್ದ. ಆ ಬಳಿಕ ಮೈಕಲ್ ಆ್ಯಂಟನಿ ಮತ್ತು ಜೇಮ್ಸ್ ಬೆವನ್ ಇ ಮೇಲ್ ಮುಖೇನ ಭಯೋತ್ಪಾದನೆ ಚಟುವಟಿಕೆಗೆ ಸಂಬಂಧವಿಲ್ಲ ಎಂಬ ಭದ್ರತಾ ಪ್ರಮಾಣಪತ್ರ ಕ್ಕೆ 83,000 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಅದಕ್ಕೂ ಸಮ್ಮತಿಸಿದ್ದ ಯುವಕ ಹಣ ರವಾನಿಸಿದ್ದಾನೆ. ಇದೇ ರೀತಿ ಸ್ಟೆಲ್ಲಾ ಮಾರೀಸ್ ,ಮೈಕೆಲ್ ಆ್ಯಂಟನಿ, ಮತ್ತು ಜೇಮ್ಸ್ ಬೆವೇನ್ ಮದುವೆ, ಕೆಲಸ, ವೀಸಾ ನೆಪವೊಡ್ಡಿ ಸುಮಾರು 11.39 ಲಕ್ಷ ರೂಪಾಯಿ ವಂಚಿಸಿದ್ದಾರೆ. ವಂಚನೆಗೊಳಗಾದ ವಿಚಾರ ಗೊತ್ತಾಗುತ್ತಿದ್ದಂತೆ ಯುವಕ ಮಂಗಳೂರಿನ ಸೈಬರ್ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ನ.19ರಂದು ಯಕ್ಷಗಾನ ಅಕಾಡೆಮಿ ವತಿಯಿಂದ ವಿವಿಧ ಪ್ರಶಸ್ತಿ ಪ್ರದಾನ

error: Content is protected !!
Scroll to Top