ಮರ್ದಾಳ: ಸಾರಕೆರೆ-ಪೊನೈತ್ತೂರು ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ..!!

(ನ್ಯೂಸ್ ಕಡಬ) newskadaba.com ಕಡಬ, ಅ.17. ತೀರ ಹದಗೆಟ್ಟ ಮರ್ದಾಳ ವ್ಯಾಪ್ತಿಯ ಸಾರಕೆರೆ-ಪೊನೈತ್ತೂರು ರಸ್ತೆಯ ಕಾಂಕ್ರೀಟೀಕರಣಕ್ಕೆ ತಾ.ಪಂ. ಸದಸ್ಯೆ ಪಿ.ವೈ. ಕುಸುಮ ಅವರಿಂದ ಸೋಮವಾರ ಚಾಲನೆ ದೊರೆಯಿತು.

2017-18ನೇ ಸಾಲಿನ ತಾ.ಪಂ.ಸದಸ್ಯರ ಅನುದಾನದಿಂದ ರೂ.1ಲಕ್ಷ ಹಾಗೂ ಗ್ರಾ.ಪಂ.ಅನುದಾನದಿಂದ ರೂ 1ಲಕ್ಷ ವರೆಗಿನ ಒಟ್ಟು 2ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ಕರಣ ನಡೆಯಲಿರುವ ಕಾಮಗಾರಿಗೆ ತಾ.ಪಂ. ಸದಸ್ಯೆ ಪಿ.ವೈ. ಕುಸುಮ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಉಪಾಧ್ಯಕ್ಷೆ ಲತಾ ಕೆ., ಎ.ಪಿ.ಎಂ.ಸಿ.ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ ಮರ್ದಾಳ ಗ್ರಾ.ಪಂ ಸದಸ್ಯರಾದ ದಾಮೋದರ ಗೌಡ ಡೆಪ್ಪುಣಿ, ಹರೀಶ್ ಕೋಡಂದೂರು ಸ್ಥಳೀಯರಾದ ಹೊನ್ನಪ್ಪ ಗೌಡ ಸಾರಕೆರೆ, ಮೋನಪ್ಪ ಗೌಡ, ಉಮೇಶ್ ಪೊನೈತ್ತೂರು, ದಿನೇಶ್ ಪಂಜೋಡಿ, ಉಲ್ಲಾಸ್ ಪಂಜೋಡಿ, ಚಂದ್ರಶೇಖರ ಪಂಜೋಡಿ ಮೊದಲಾದವರು ಉಪಸ್ಥಿತರಿದ್ದರು. ಕಡಬ ತಾಲೂಕು ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಪ್ರಶಾಂತ್ ಪಂಜೋಡಿ ಸ್ವಾಗತಿಸಿ ವಂದಿಸಿದರು.

Also Read  ಆತ್ಮ ನಿರ್ಭರ ಭಾರತ ಸಂಕಲ್ಪ ➤ ಪಂಜದಲ್ಲಿ ತರಕಾರಿ ಬೀಜ ವಿತರಣೆ

error: Content is protected !!
Scroll to Top