(ನ್ಯೂಸ್ ಕಡಬ) newskadaba.com ಕಡಬ, ಅ.17. ಮರ್ದಾಳ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅಂಗಳಕ್ಕೆ ಐತ್ತೂರು .ಪಂ.ಸದಸ್ಯರ 2017-18ನೇ ಸಾಲಿನ ರೂ.1ಲಕ್ಷ ಅನುದಾನದಲ್ಲಿ ಇಂಟರ್ಲಾಕ್ ಅಳವಡಿಸಲು ಸೋಮವಾರ ಗುದ್ದಲಿಪೂಜೆ ನಡೆಯಿತು.
ತಾ.ಪಂ ಸದಸ್ಯೆ ಪಿ.ವೈ. ಕುಸುಮ ಗುದ್ದಲಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನಾನು ಇದೇ ಶಾಲೆಯ ಹಳೇಯ ವಿದ್ಯಾರ್ಥಿಯಾಗಿದ್ದು, ಇಲ್ಲಿನ ಶಿಕ್ಷಕರು ಅನೇಕ ಬಾರಿ ಶಾಲಾ ಅಂಗಳಕ್ಕೆ ಇಂಟರ್ಲಾಕ್ ಅಳವಡಿಸುವ ಬಗ್ಗೆ ಬೇಡಿಕೆ ಇಟ್ಟಿದ್ದರು. ಆದರೆ ಈಗ ಸೂಕ್ತ ಸಮಯ ಒದಗಿ ಬಂದಿದೆ ಮುಂದಿನ ದಿನಗಳಲ್ಲಿ ನನ್ನಿಂದ ಸಾಧ್ಯವಾದಷ್ಟು ಶಾಲೆಯ ಅಭಿವೃದ್ಧಿಗೆ ಶ‍್ರಮಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭ ತಾ.ಪಂ.ಸದಸ್ಯ ಗಣೇಶ್ ಕೈಕುರೆ, ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಎ.ಪಿ.ಎಂ.ಸಿ. ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಸಿ.ಎ.ಬ್ಯಾಂಕ್ ನಿರ್ದೇಶಕಿ ಲೀಲಾವತಿ ರೈ, ಜಿಲ್ಲಾ ಛಾಯಗ್ರಾಹಕ ಸಂಘದ ನಿರ್ದೇಶಕ ಬಾಲಕೃಷ್ಣ ಗೌಡ, ತಾ.ಪಂ.ಮಾಜಿ ಸದಸ್ಯೆ ದಿವ್ಯಾ ಬಾಲಕೃಷ್ಣ ಗೌಡ, ಗ್ರಾ.ಪಂ.ಸದಸ್ಯರಾದ ಹರೀಶ್ ಕೋಡಂದೂರು, ದಾಮೋದರ ಡೆಪ್ಪುಣಿ, ಗ್ರಾ.ಪಂ.ಲೆಕ್ಕ ಸಹಾಯಕ ಭುವನೆಂದ್ರ ಕುಮಾರ್, ಪ್ರಮುಖರಾದ ಸಂಜೀವ ಶೆಟ್ಟಿ ಮರ್ದಾಳ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಿನಾಥ್, ಸದಸ್ಯ ಬಶೀರ್ ಮರ್ದಾಳ, ಗುತ್ತಿಗೆದಾರ ಅಭಿಲಾಷ್ ಬಿಳಿನೆಲೆ, ಶಾಲಾ ಮುಖ್ಯಗುರು ದೇವಕಿ ಪಿ., ಶಿಕ್ಷಕ ಜಿನ್ನಪ್ಪ ಗೌಡ ಎಸ್., ಶಿಕ್ಷಕಿಯರಾದ ಸುಜಾತ ಎಂ., ಆಶಾಕುಮಾರಿ, ಸವಿತಾ ಎ., ವಿದ್ಯಾರ್ಥಿ ನಾಯಕಿ ಕು.ಅಭಿಜ್ಞಾ ರೈ ಉಪಸ್ಥಿತರಿದ್ದರು. ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಸ್ವಾಗತಿಸಿ ವಂದಿಸಿದರು.