ಉದನೆ-ಶಿಬಾಜೆ ಜಿ.ಪಂ. ರಸ್ತೆಗೆ 80 ಲಕ್ಷ ರೂ. ► ಗೋಳಿತ್ತಡಿ-ತ್ರಿವೇಣಿ ಸರ್ಕಲ್ ರಸ್ತೆಗೆ 49 ಲಕ್ಷ ರೂ ಅನುದಾನ ಮಂಜೂರು: ಪಿ.ಪಿ.ವರ್ಗೀಸ್

(ನ್ಯೂಸ್ ಕಡಬ) newskadaba.com ಕಡಬ, ಅ.17. ಉದನೆ-ಶಿಬಾಜೆ ಜಿ.ಪಂ. ರಸ್ತೆಯ ಮರುಡಾಮರೀಕರಣಕ್ಕೆ ನಬಾರ್ಡ್ನಿಂದ 80 ಲಕ್ಷ ರೂ.ಅನುದಾನ ಮಂಜೂರುಗೊಂಡಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ತಿಳಿಸಿದ್ದಾರೆ.

ಉದನೆ-ಶಿಬಾಜೆ ರಸ್ತೆ ಅಭಿವೃದ್ಧಿಗೆ 2 ವರ್ಷಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರಕಾರಕ್ಕೆ ಒತ್ತಡ ಹೇರಲಾಗಿತ್ತು. ಈ ವೇಳೆ ಅನುದಾನ ಬಿಡುಗಡೆಗೊಂಡಿದ್ದರೂ ಅನುದಾನವನ್ನು ಕಾರಣಾಂತರದಿಂದ ತಡೆಹಿಡಿಯಲಾಗಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಶಿಫಾರಸ್ಸಿನೊಂದಿಗೆ ಕೆಪಿಸಿಸಿ ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ, ನೆಲ್ಯಾಡಿ ಕ್ಷೇತ್ರದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ತಾ.ಪಂ.ಸದಸ್ಯೆ ಆಶಾ ಲಕ್ಷ್ಮಣ್ರವರ ನೇತೃತ್ವದಲ್ಲಿ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ, ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್ರವರಿಗೆ ಮನವಿ ಮಾಡಲಾಗಿತ್ತು. ಈ ಮನವಿ ಮೇರೆಗೆ 80 ಲಕ್ಷ ರೂ.ಅನುದಾನ ಬಿಡುಗಡೆಗೊಂಡಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

Also Read  ಹೊರಗುತ್ತಿಗೆ ಟೆಂಡರ್ ಆಹ್ವಾನ

ಜಿ.ಪಂ.ಸದಸ್ಯರಾದ ಸರ್ವೋತ್ತಮ ಗೌಡ ಹಾಗೂ ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಬಾನಡ್ಕರವರ ಮುತುವರ್ಜಿಯಲ್ಲಿ ಕೊೖಲ ಗ್ರಾಮದ ಏಣಿತ್ತಡ್ಕ ಸಂಪರ್ಕ ರಸ್ತೆಯ ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ವರೆಗಿನ ರಸ್ತೆಯ ಮರುಡಾಮರೀಕರಣಕ್ಕೆ 49 ಲಕ್ಷ ರೂ.ಮಂಜೂರುಗೊಂಡಿದೆ. ಸದ್ರಿ ರಸ್ತೆ ಮರುಡಾಮರೀಕರಣಕ್ಕೆ ಅನುದಾನ ಬಿಡುಗಡೆಗೊಂಡಿದೆ ಎಂದು ಪಿ.ಪಿ.ವರ್ಗೀಸ್ ಹೇಳಿದ್ದಾರೆ.

error: Content is protected !!
Scroll to Top