5 ಅಡಿ ಆಳದ ಗುಂಡಿಗೆ ಬಿದ್ದ ಬೈಕ್ ► ಇಬ್ಬರು ಫೋಟೋಗ್ರಾಫರ್ ಗೆ ಗಾಯ..!!!

(ನ್ಯೂಸ್ ಕಡಬ) newskadaba.com ರಾಯಚೂರು, ಅ.14. ಪತ್ರಿಕಾ ಛಾಯಾಗ್ರಾಹಕರಿಬ್ಬರು ಬೈಕ್ ಸಮೇತ ನೀರಿನ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪುರಸಭೆ ವ್ಯಾಪ್ತಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನಡೆದಿದೆ.

ಛಾಯಾಗ್ರಾಹಕರಾದ ಗಯಾಸ್ ಹಾಗೂ ಶೇಕ್ ಬಾಬಾ ಗಾಯಗೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಕ್ಯಾಮೆರಾ, ಲಾಪ್ ಟಾಪ್, ಪೆನ್‍ಡ್ರೈವ್ ಮತ್ತು ಮೊಬೈಲ್ ಹಾಳಾಗಿವೆ.

ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲಾ ಆವರಣದಲ್ಲಿ ನಿಲ್ಲುತ್ತಿತ್ತು. ಮಳೆ ನೀರಿನ ಸಂಗ್ರಹಕ್ಕೆಂದು ಪುರಸಭೆಯವರು 5 ಅಡಿ ಆಳದ ಗುಂಡಿ ತೋಡಿದ್ದು, ಆದರೆ ಮಾನ್ವಿ ಪಟ್ಟಣದ ಪುರಸಭೆಯವರು ಅಕ್ಕ ಪಕ್ಕ ಯಾವುದೇ ರೀತಿಯ ಸೂಚನಾ ಫಲಕವನ್ನು ಹಾಕಿಲ್ಲ. ಹೀಗಾಗಿ ಶಾಲಾ ಗೇಟ್ ಪಕ್ಕದಲ್ಲೇ ಇರುವ ಗುಂಡಿಯ ಆಳ ತಿಳಿಯದೇ ಬಂದ ಛಾಯಾಗ್ರಾಹಕರು ಬೈಕ್ ಸಹಿತವಾಗಿ ಗುಂಡಿಯಲ್ಲಿ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಓಡಾಡುವ ಸ್ಥಳದಲ್ಲೇ ಗುಂಡಿಯನ್ನು ತೋಡಿ ಹಾಗೇ ಬಿಟ್ಟಿರುವುದು ದೊಡ್ಡ ಅನಾಹುತಗಳಿಗೆ ಆಹ್ವಾನದಂತಿವೆ.

Also Read  ದೀಪಾವಳಿ ವಿಶೇಷ ► ಮಾರುತಿ ಸುಝುಕಿ ಕಾರುಗಳಲ್ಲಿ ಭರ್ಜರಿ ಡಿಸ್ಕೌಂಟ್

ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾನ್ವಿ ಪುರಸಭೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಛಾಯಾಗ್ರಾಹಕರು ಮುಂದಾಗಿದ್ದಾರೆ.

 

error: Content is protected !!
Scroll to Top