ಶಾಲಾ ಬಾಲಕಿಗೆ ಸ್ಪ್ರೇ ಸಿಂಪಡಿಸಿದ ಪ್ರಕರಣ ➤ಶಾಲೆಯಿಂದ ತಪ್ಪಿಸಿಕೊಳ್ಳಲು ನಾಟಕವಾಡಿದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಕುಕ್ಕುಜಡ್ಕ, ಜ.06: ಶಾಲಾ ಬಾಲಕಿಗೆ ಸ್ಪ್ರೇ ಸಿಂಪಡಿಸಿ ಅಪರಿಚಿತರು ಪರಾರಿಯಾಗಿದ್ದ ಘಟನೆಗೆ ರೋಚಕ ತಿರುವೊಂದು ಸಿಕ್ಕಿದೆ. ಈ ಘಟನೆ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಆನೆಕಾರ್ ಎಂಬಲ್ಲಿ ನಡೆದಿತ್ತು .ಇನ್ನು ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.

ಕುಕ್ಕುಜಡ್ಕ ಶಾಲೆಗೆ ಹೋಗುತ್ತಿರುವಾಗ ಆನೆಕಾರ್ ಸಮೀಪ ಬೈಕ್ ನಲ್ಲಿ ಬಂದ ವ್ಯಕ್ತಿಗಳು ರಾಸಾಯನಿಕವೊಂದನ್ನು ಬಾಲಕಿಗೆ ಸ್ಪ್ರೇ ಮಾಡಿ ಆಕೆಯ ಪ್ರಜ್ಞೆ ತಪ್ಪಿಸಿ ಪರಾರಿಯಾಗಿದ್ದರು. ಈ ಮೂಲಕ ಮತ್ತೊಂದು ಅಪಹರಣಕ್ಕೆ ಈ ಕೃತ್ಯ ನಡೆಯಿತೇ ಎಂಬ ವದಂತಿಗಳು ಹರಿದಾಡಿತ್ತು. ಆದರೆ ಈ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಹೊಸ ತಿರುವು ದೊರಕಿದೆ. ಇದು ಬಾಲಕಿಯೇ ಶಾಲೆಗೆ ಹೋಗಲು ಹಿಂಜರಿದು ಕತೆ ಕಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ತೀವ್ರ ವಿಚಾರಣೆಗೆ ಬಾಲಕಿಯನ್ನು ಬೆಳ್ಳಾರೆ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ಈ ವೇಳೆ ಬಾಲಕಿಯ ನಾಟಕ ಬಯಲಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ, ತಾನು ಹೇಳಿದ್ದು ಕಟ್ಟು ಕತೆ, ನನಗೆ ಶಾಲೆಗೆ ತೆರಳಲು ಇಷ್ಟವಿರದ ಕಾರಣ ಈ ರೀತಿಯಾಗಿ ಮಾಡಿರುವೇ ಎಂದು ಹೇಳಿದ್ದಾಳೆ.

Also Read  ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ► ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

 

error: Content is protected !!
Scroll to Top