ಪಣೋಲಿಬೈಲ್ ಕ್ಷೇತ್ರಕ್ಕೆ ಚಿತ್ರನಟಿ ತಾರಾ ಅನೂರಾಧ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.06: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಅವರು ಕುಟುಂಬ ಸಹಿತ ಸೋಮವಾರ ಬಂಟ್ವಾಳ ತಾಲೂಕಿನ ಪ್ರಸಿದ್ಧ ಕಾರಣಿಕದ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿದರು.

 

ಕ್ಷೇತ್ರದ ಕಾರಣಿಕ ಶಕ್ತಿಯನ್ನು ನಂಬಿ ಇಲ್ಲಿಗೆ ಬಂದಿದ್ದು, ಪಣೋಲಿಬೈಲಿನ ತಾಯಿ ದರ್ಶನ ಪಡೆಯುವುದಕ್ಕೆ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ ಎಂದು ಈ ಸಂದರ್ಭ ಅವರು ಹೇಳಿದರು. ತಾರ ಅವರ ತಾಯಿ ಪುಷ್ಪಮ್ಮ, ಉದ್ಯಮಿ ವೆಂಕಟೇಶ್, ಶ್ರೀ ಆದಿಮಾಯೆ ಮಹಾಲಕ್ಮೀ ಮಂದಿರದ ಪಾತ್ರಿ ರಾಜೇಶ್, ಬೆಂಗಳೂರು ಉದ್ಯಮಿ ಗಣೇಶ್, ನಟ ಹರೀಶ್ ಆಚಾರ್ಯ, ಜೀವನ ರತನ್, ಅರ್ಚಕ ವರ್ಗ, ಸಿಬ್ಬಂದಿ ಹಾಜರಿದ್ದರು.

Also Read  ಪಿಂಚಣಿದಾರರ ಅಹವಾಲು ➤ ಶೀಘ್ರದಲ್ಲಿ ಸಭೆ

error: Content is protected !!
Scroll to Top