(ನ್ಯೂಸ್ ಕಡಬ) newskadaba.com ಮಂಗಳೂರು,ಅ.12. ಇತ್ತಿಫಾಕ್ ಮೀಲಾದ್ ಕಮಿಟಿ ಜೋಗಿಬೆಟ್ಟು, ಗಡಿಯಾರ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ನಾಟೆಕಲ್, ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರವು ಗಡಿಯಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಶೆಟ್ಟಿ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಾಜದಲ್ಲಿನ ಬಡ-ನಿರ್ಗತಿಕರ ಆರೋಗ್ಯವನ್ನು ಕಾಪಾಡುವಲ್ಲಿ ಯುವಕರು ಸಂಘಟಿತರಾಗಿ ಉಚಿತ ವೈದ್ಯಕೀಯ ಶಿಬಿರ ನಡೆಸುವುದರೊಂದಿಗೆ, ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.
ಎಂ.ಜೆ.ಎಂ. ಗಡಿಯಾರ್ ಇಲ್ಲಿನ ಖತೀಬರಾದ ಟಿ.ಪಿ. ಜಮಾಲುದ್ದೀನ್ ದಾರಿಮಿ ಪ್ರಾರ್ಥಿಸಿದರು. ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಯು.ಕೆ. ಮೋನು ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಂ.ಜೆ.ಎಂ. ಗಡಿಯಾರ್ನ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಪಾರ್ಪಕಜೆ, ಗಡಿಯಾರ್ ಸರಕಾರೀ ಪ್ರಾರ್ಥಮಿಕ ಶಾಲೆ ಸಹ ಶಿಕ್ಷಕರಾದ ಸದಾನಂದ ಶೆಟ್ಟಿ ನೇರಳಕಟ್ಟೆ ವ್ಯ.ಸೇ.ಸ. ಬ್ಯಾಂಕಿನ ಉಪಾಧ್ಯಕ್ಷರಾದ ಕುಶಲ ಎಂ. ಪೆರಾಜೆ, ಪುತ್ತೂರು ನಗರ ಸಭೆಯು ನಾಮ ನಿರ್ದೇಶಿತ ಸದಸ್ಯ ಹರ್ಷದ್ ದರ್ಬೆ, ಎಂ. ಪ್ರೆಂಡ್ಸ್‌ನ ಸದಸ್ಯ ಆಶಿಕ್ ಕುಕ್ಕಾಜೆ, SDPI ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಜಬೀರ್ ಅರಿಯಡ್ಕ, ಮದರಂಗಿ ಮಾಸಿಕದ ಸಂಪಾದಕ ಡಿ.ಐ. ಅಬೂಬಕ್ಕರ್ ಕೈರಂಗಳ, ಅಕ್ಷರ ಮಾಧ್ಯಮ ಸಂಸ್ಥೆಯ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಯಿಲ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಇಬ್ರಾಹಿಂ ಪೇರಮೊಗ್ರು, SDPI ಕಾರ್ಬೆ ವಲಯದ ಉಪಾಧ್ಯಕ್ಷರಾದ ಉಸ್ಮಾನ್ ಎ.ಕೆ., ಇತ್ತಿಫಾಕ್ ಮೀಲಾದ್ ಕಮಿಟಿಯ ಗೌರವಾಧ್ಯಕ್ಷ ಹೈದರ್ ವಿದ್ಯಾನಗರ, ಅಧ್ಯಕ್ಷರಾದ ರಶೀದ್ ಜೋಗಿಬೆಟ್ಟು, ಉಪಾಧ್ಯಕ್ಷರಾದ ಯೂಸುಫ್, ಹಿರಿಯ ಸದಸ್ಯರಾದ ರಿಯಾಝ್ ವಿದ್ಯಾನಗರ, ಅಝೀಝ್ ವಿದ್ಯಾನಗರ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಪಿ.ಜೆ. ಅಬ್ದುಲ್ ಅಝೀಝ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಉಚಿತ ವೈದ್ಯಕೀಯ ತಪಾಸನಾ ಶಿಬಿರ ನಡೆಯಿತು. ಸುಮಾರು 400ಕ್ಕೂ ಅಧಿಕ ಮಂದಿ ಈ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಂಡರು.