(ನ್ಯೂಸ್ ಕಡಬ) newskadaba.com ಕಡಬ,ಅ.12. ಇಲ್ಲಿನ ಕಲ್ಲಂತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕಾ ಆಹಾರ ಸಪ್ತಾಹ ಹಾಗೂ ಮಾತೃಪೂರ್ಣ ಯೋಜನೆ ಇತ್ತೀಚೆಗೆ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮಾರಾಮದಾಸ್ ಮಾತೃಪೂರ್ಣ ಯೋಜನೆ ಹಾಗೂ ಪೌಷ್ಟಿಕಾ ಆಹಾರದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಕಿ.ಆರೋಗ್ಯ ಸಹಾಯಕಿ ಬಿ.ಬಿ.ಅನ್ನಮ್ಮ, ಆಶಾಕಾರ್ಯಕರ್ತೆ ನಿತ್ಯಾಲತಾ ಹಾಗೂ ಹಿರಿಯ ನಾಗರಿಕ ಮಹಿಳೆ ಅರುಣಾ ಸೇರಿದಂತೆ ಸ್ರೀಶಕ್ತಿ ಸದಸ್ಯೆಯರು. ಗರ್ಭಿಣಿಯರು , ಬಾಣಂತಿಯರು, ಕಿಶೋರಿಯರು, ಪೋಷಕರು ಪುಟಾಣಿಗಳು ಉಪಸ್ಥಿತರಿದ್ದರು.
ಸ್ತ್ರೀಶಕ್ತಿ ಸಂಘದ ಮಹಿಳೆಯರು ವಿವಿಧ ಬಗ್ಗೆಯ ಪೌಷ್ಟಿಕ ಆಹಾರ ತಯಾರಿಸಿ ತಂದಿದ್ದು ಇದರ ಪ್ರಾತ್ಯಕ್ಷಿಕತೆ ನಡೆಯಿತು. ಉತ್ತಮ ಆಹಾರಕ್ಕೆ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಬಹುಮಾನವನ್ನು ಸ.ಪ.ಪೂ.ಕಾಲೇಜಿನ ಉಪನ್ಯಾಶಕ ವಾಸುದೇವ ಗೌಡ ಕೋಲ್ಪೆ ಕೊಡುಗೆ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಪವಿತ್ರಾಲತಾ ಸ್ವಾಗತಿಸಿ, ರೇವತಿ ವಂದಿಸಿದರು.