ಸವಣೂರು : ಇನ್ಸ್ಟಾಗ್ರಾಂ ಮೂಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೆಸ್ಕಂ ಉದ್ಯೋಗಿ ➤ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಡಿ.22: ಕಡಬದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಮೇಸ್ಕಂ ಸಿಬ್ಬಂದಿ ಸೊಯೂಬ್ ಕೊತ್ವಾಲ್ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕಿನ ಸವಣೂರು ಗ್ರಾಮದ ಮಣೆಮಜಲು ನಿವಾಸಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಾಲಕಿಗೆ ಮೆಸ್ಕಾಂ ಉದ್ಯೋಗಿ ಸೊಯೂಬ್ ಕೊತ್ವಾಲ್ ಎಂಬಾತ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.  ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಆಕೆಯ ಬಳಿ ತನ್ನನ್ನು ಪ್ರೀತಿಸುವಂತೆ ಒತ್ತಡ ಹೇರಿದ್ದಾನೆ, ಬಳಿಕ ಅಸಭ್ಯವಾಗಿ ಸಂದೇಶ ಕಳುಹಿಸುತ್ತಿದ್ದು, ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈರೀತಿಯಾಗಿ ಕಳೆದ ನಾಲ್ಕು ತಿಂಗಳುಗಳಿಂದ ಒತ್ತಡ ಹೇರುತ್ತಿದ್ದು ಇದೀಗಾ ಬಾಲಕಿ ಈ ವಿಚಾರವನ್ನು ತಾಯಿಯ ಬಳಿ ತಿಳಿಸಿದ್ದು, ಬಳಿಕ ಬಾಲಕಿಯ ಹೆತ್ತವರು ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌ - ಇಬ್ಬರು ನಕ್ಸಲೀಯರ ಹತ್ಯೆ

error: Content is protected !!
Scroll to Top