ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ➤ ವಿತರಣೆ/ ನವೀಕರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‍ಗಳನ್ನು ವಿತರಣೆ/ ನವೀಕರಣ ಮಾಡಲು ಫೆಬ್ರವರಿ 28 ರವರೆಗೆ ಮಾನ್ಯ ಮಾಡಲಾಗುತ್ತದೆ.

ಡಿಸೆಂಬರ್ 26 ರಿಂದ ವಿಕಲಚೇತನರ ಪಾಸ್‍ಗಳ ವಿತರಣೆ/ ನವೀಕರಣವನ್ನು ಪ್ರಾರಂಭಿಸಲಾಗುವುದು. ಫಲಾನುಭವಿಗಳು ರೂ. 660 ನಗದು ರೂಪದಲ್ಲಿ ಪಾವತಿಸಿ ಪ್ರಸ್ತುತ ಸಾಲಿಗೆ ಪಾಸ್ ಪಡೆಯಬಹುದಾಗಿದೆ. ನವೀಕರಣ/ಹೊಸ ಪಾಸು ಪಡೆಯುವ ಫಲನುಭವಿಗಳು ಅರ್ಜಿಯನ್ನು ಸೇವಾಸಿಂಧು ಪೋರ್ಟಲ್  ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ..
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗೀಯ ದೂ. ಸಂಖ್ಯೆ: 08251-235421 ಸಂಪರ್ಕಿಸಲು ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಾರ್ಯಸಿದ್ದಿ ಆಂಜನೇಯ ನೆನೆಯುತ್ತ ದಿನ ಭವಿಷ್ಯ ನೋಡಿ

 

 

error: Content is protected !!
Scroll to Top