ಕಲಾ ಸಾಮ್ರಾಟ್ ನಟ, ನಿರ್ದೇಶಕ ಎಸ್.ನಾರಾಯಣ್ ಅವರಿಗೆ ಡಾಕ್ಟರೇಟ್ ಪ್ರದಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.22: ಕಲಾ ಸಾಮ್ರಾಟ್​, ನಟ, ನಿರ್ದೇಶಕ ಎಸ್.ನಾರಾಯಣ್ ಅವರಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.ಕನ್ನಡ ಚಿತ್ರರಂಗದಲ್ಲಿ ನಾರಾಯಣ್ ಅವರ ಸೇವೆಯನ್ನು ಗುರುತಿಸಿರುವ ಯೂನಿವರ್ಸ್‍ಲ್ ಡೆವಲಪ್‍ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟನ್ನು ನೀಡಿದೆ.

ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ ಎಸ್. ನಾರಾಯಣ್ ಚಿತ್ರರಂಗದಲ್ಲಿ ಅಗ್ರಮಾನ್ಯ ಸೇವೆ ಸಲ್ಲಿಸಿರುವ ಕಾರಣ ಗೌರವ ಸಲ್ಲಿಸಲಾಗಿದೆ. ರಘುವೀರ್ ನಟನೆಯ ಚೈತದ ಪ್ರೇಮಾಂಜಲಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಎಸ್.ನಾರಾಯಣ್ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದು, 49ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Also Read  ಚಿಕಿತ್ಸೆ ನೀಡಲು ನಿರಾಕರಿಸಿದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಅಮಾನತು.!

 

 

error: Content is protected !!
Scroll to Top