(ನ್ಯೂಸ್ ಕಡಬ) newskadaba.com ಪಂಜ, ಡಿ.22: ಪ್ರತಿಷ್ಠಿತ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಜಸ್ವಿತ್ ತೋಟ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
317 D ಲಯನ್ಸ್ ಜಿಲ್ಲೆಯಲ್ಲಿ ಪಂಜ ಲಯನ್ಸ್ ಕ್ಲಬ್ ನ್ನು ಪ್ರತಿನಿಧಿಸಿ ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಸುಮಾರು ದೇಶಾದ್ಯಂತ 80ಕ್ಕಿಂತ ಹೆಚ್ಚಿನ ಲಯನ್ಸ್ ಜಿಲ್ಲೆಯ ಪ್ರತಿನಿಧಿಸಿ ವಿಶ್ವಶಾಂತಿಯ ಕಲಾಕೃತಿ ಗಳಲ್ಲಿ ಜಸ್ವಿತ್ ತೋಟ ಇವರ ಕಲಾಕೃತಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಗೊಂಡಿರುತ್ತದೆ. ಸುಮಾರು 220 ದೇಶಗಳ ಕಲಾವಿದರು ಭಾಗವಹಿಸುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ .ಇವರು ಶ್ರೀ ಸುನಿಲ್ ತೋಟ ಮತ್ತು ಶ್ರೀಮತಿ ಮಮತಾ ಮಣಿ ಇವರ ಪುತ್ರ ಇವನಿಗೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ತರಬೇತಿಯನ್ನು ನೀಡುತ್ತಿದ್ದಾರೆ.