ಬಂಟ್ವಾಳ: ಎಸ್ ಐಗಳು, ಸಿಬ್ಬಂದಿ ಮೇಲೆಯೇ ಕಾರು ಹಾಯಿಸಿದ ಪ್ರಕರಣ ➤ ಇಬ್ಬರಿಗೆ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22: ಎರಡೂವರೆ ವರ್ಷಗಳ ಹಿಂದೆ ಬಂಟ್ವಾಳದ ಮಣಿಹಳ್ಳದಲ್ಲಿ ಮಧ್ಯರಾತ್ರಿ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ್ದು ಹಾಗೂ ಹಲ್ಲೆ ನಡೆಸಲು ಬಂದ ಪ್ರಕರಣಕ್ಕೆ ಸಂಬಂಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದು, ಆರೋಪಿಗಳಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 3 ಸಾವಿರ ರೂ. ದಂಡ ವಿಧಿಸಿದ್ದಾರೆ.

ಮಾರಿಪಳ್ಳ ನಿವಾಸಿ ಸದ್ದಾಂ ಹುಸೈನ್, ಕುಪ್ಪೆಪದವು ನಿವಾಸಿ ಮಹಮ್ಮದ್ ಇರ್ಷಾದ್ ಶಿಕ್ಷೆಗೊಳಪಟ್ಟವರು. ಮತ್ತೋರ್ವ ಆರೋಪಿ ಮಹಮ್ಮದ್ ಮುಕ್ಸೀನ್ ಕೋರ್ಟ್ ಜಾಮೀನು ಪಡೆದು ಬಳಿಕ ಹಾಜರಾಗದೆತಲೆಮರೆಸಿಕೊಂಡಿದ್ದು,ಅತನ ವಿಚಾರಣೆ, ಶೋಧ ಇನ್ನೂ ಮುಂದುವರಿದಿದೆ.

Also Read  ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ➤ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ

 

error: Content is protected !!
Scroll to Top