ಕಡಬ :ಬಲ್ಯ-ದೇರಾಜೆ 2ನೇ ವಾರ್ಡ್ ಸಂಪಡ್ಕ ಕಾಲೊನಿ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಡಿ.21: ಇಲ್ಲಿನ ಬಲ್ಯ ಗ್ರಾಮದ ದೇರಾಜೆ 2ನೇ ವಾರ್ಡಿನ ಸಂಪಡ್ಕ ಪ.ಜಾತಿ ಕಾಲೊನಿ ನಿವಾಸಿಗಳು ತಮ್ಮೂರಿನ ನಾನಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಂಚಾಯತ್ ಚುನಾವಣೆ ಬಹಿಸ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಕಾಲೊನಿಯ ಸುಮಾರು 15 ಕುಟುಂಬಗಳು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ತಮ್ಮ ಕಾಲೊನಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು, ಸಾರ್ವಜನಿಕ ರಸ್ತೆ ಹದಗೆಟ್ಟಿರುವುದು, ಶೌಚಾಲಯ ಪಾಳು ಬಿದ್ದರೂ ಸರಿಪಡಿಸದೆ ಇರುವುದು, ಪರಿಶಿಷ್ಟ ಜಾತಿಯವರ ರುದ್ರಭೂಮಿ ಅಭಿವೃದ್ದಿ ಮಾಡದಿರುವುದು, ಕಾಲೊನಿ ಹೆಸರಿನಲ್ಲಿ ಬೇರೆಡೆ ಸೌಲಭ್ಯಗಳನ್ನು ಒದಗಿಸುವುದು ಮೊದಲಾದ ಕಾರಣಗಳನ್ನು ಇಟ್ಟುಕೊಂಡು ಈ ಕಾಲೊನಿಯ ನಿವಾಸಿಗಳು ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

Also Read  ಕರ್ನಾಟಕ ಕರಾವಳಿ ಮೀನುಗಾರಿಕಾ ಇಲಾಖೆಯಿಂದ ಮೀನುಗಾರಿಕೆ ಮಾಡದಂತೆ ನಿಷೇಧಾಜ್ಞೆ ಜಾರಿ

error: Content is protected !!
Scroll to Top