(ನ್ಯೂಸ್ ಕಡಬ) newskadaba.com ಅರಂತೋಡು, ಡಿ.21: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಅರಂತೋಡು ಗ್ರಾಮದ ಕಟ್ಟೆಕೋಡಿ ನಿವಾಸಿ ಚೌಕರ್ (60 ವರ್ಷ) ಎಂದು ಗುರುತಿಸಲಾಗಿದೆ ಕುಶಾಲ ನಗರದಿಂದ ಕೆಎಸ್‌ಆರ್ಟಿಸಿ ಬಸ್ಸಿನಲ್ಲಿ ಹೊರಟಿದ್ದ ಅವರು ಸುಳ್ಯಕ್ಕೆ ತಲುಪುವ ವೇಳೆಯಲ್ಲಿ ಬಸ್ಸಿನಲ್ಲಿ ಕುಳಿತ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು.