ಮಂಗಳೂರು-ದೇರಳಕಟ್ಟೆಯಿಂದ ಎರ್ನಾಕುಲಂಗೆ ಕ್ಲಬ್ ಕ್ಲಾಸ್ ವೋಲ್ವೋ ಬಸ್ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.21: ಕರಾರಸಾ.ನಿಗಮದ ವತಿಯಿಂದ ಮಂಗಳೂರು ಬಸ್ಸು ನಿಲ್ದಾಣದಿಂದ ದೇರಳಕಟ್ಟೆ ಮಾರ್ಗವಾಗಿ ಎರ್ನಾಕುಲಂ ಗೆ ಹೋಗುವ ವೋಲ್ವೋ ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 18 ರಿಂದ ಆರಂಭಿಸಲಾಗುವುದು. ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‍ಒಪಿ ರಲ್ಲಿಯ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗುವುದು.

ಸದರಿ ಮಾರ್ಗದ ಸಾರಿಗೆ ಕಾರ್ಯಾಚರಣೆಯ ವಿವರ: ಕ್ಲಬ್ ಕ್ಲಾಸ್ ವೋಲ್ವೋ ಮಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು 9.25 ಕ್ಕೆ ದೇರಳಕಟ್ಟೆ ಮಾರ್ಗವಾಗಿ ಎರ್ನಾಕುಲಂ ಗೆ ಬೆಳಿಗ್ಗೆ 5 ಗಂಟೆಗೆ ತಲುಪಲಿದೆ. (ವಯಾ ಕಾಸರಗೋಡು, ಕ್ಯಾಲಿಕಟ್, ತ್ರಿಶ್ಯೂರ್, ಅಳಪೆ), ಎರ್ನಾಕುಲಂ ನಿಂದ ರಾತ್ರಿ 8.30 ಕ್ಕೆ ಹೊರಟು 5.35 ಕ್ಕೆ ಮಂಗಳೂರು ತಲುಪಲಿದೆ.ಸಾರಿಗೆಗಳಿಗೆ ಆನ್‍ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಉಡುಪಿ: ಜಾದೂಗಾರ ಕುದ್ರೋಳಿ ಗಣೇಶ್ ರವರ 'ಮೈಂಡ್ ಮಿಸ್ಟರಿ ' ಪ್ರದರ್ಶನದ ಪೋಸ್ಟರ್ ಬಿಡುಗಡೆ

 

 

error: Content is protected !!
Scroll to Top