ಕೇರಳದಲ್ಲಿ ಪತ್ತೆಯಾಯ್ತು ಹೊಸ ಸೋಂಕು..! ➤ಶಿಜೆಲ್ಲಾಗೆ ಬಲಿಯಾದ 11ರ ಬಾಲಕ

(ನ್ಯೂಸ್ ಕಡಬ) newskadaba.com ಕೇರಳ, ಡಿ.21:ಮಹಾಮಾರಿ ಸೋಂಕಿನ ಆರ್ಭಟ ಇನ್ನೂ ನಿಂತಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡರೂ ದೇಶ ಬಿಟ್ಟು ಹೋಗಿಲ್ಲ.ದೇಶದಲ್ಲೆಡೆ ಕೊರೊನಾಗೆ ಸಾಕಷ್ಟು ಜನ ಬಲಿಯಾಗಿದ್ದಲ್ಲದೆ ದಿನನಿತ್ಯ ಸಾವಿರಾರು ಕೇಸ್‌ಗಳು ಪತ್ತೆಯಾಗುತ್ತಲೇ ಇವೆ. ಈ ಮಧ್ಯೆ ಮತ್ತೊಂದು ಬ್ಯಾಕ್ಟೀರಿಯಾ ಹಾವಳಿ ಹೆಚ್ಚಾಗಿದೆ.

 

ಶಿಜೆಲ್ಲಾ ಬ್ಯಾಕ್ಟೀರಿಯಾ ಎಂಬ ಸೋಂಕಿನ ಭೀತಿ ಇದೀಗ ಹೆಚ್ಚಾಗಿದ್ದು, ಈ ಸೋಂಕಿಗೆ ಕೇರಳದ ವಯನಾಡ್‌ನಲ್ಲಿ 11 ವರ್ಷದ ಬಾಲಕ ಬಲಿಯಾಗಿರುವುದು ತಿಳಿದು ಬಂದಿದೆ. ಕೇರಳದ ಕೊಜಿಕ್ಕೋಡ್​ನಲ್ಲಿ ಸೋಂಕು ಕಂಡು ಬಂದಿದ್ದು. ಈಗಾಗಲೇ 26 ಶಂಕಿತ ಸೋಂಕಿತರು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಶಿಜೆಲ್ಲಾ ಬ್ಯಾಕ್ಟೀರಿಯಾ ಸೋಂಕು ತಗುಲಿದರೆ ಆ ವ್ಯಕ್ತಿಯಲ್ಲಿ ಅತಿಸಾರ, ಜ್ವರ, ವಾಂತಿ, ಹೊಟ್ಟೆನೋವು ಕಾಣಿಸುತ್ತದೆ. ಈ ಸೋಂಕು ಕಲುಷಿತ ನೀರು ಕುಡಿಯುವುದರಿಂದ ಹರಡಿರಬಹುದು ಎಂದು ಅಲ್ಲಿನ ತಜ್ಞರ ತಂಡವೊಂದು ಹೇಳಿದೆ.

Also Read  ಮಡಿಕೇರಿ: ಕಾಲುಜಾರಿ ಬಿದ್ದು ಎನ್‍ಸಿಸಿ ಅಧಿಕಾರಿ ಮೃತ್ಯು

error: Content is protected !!
Scroll to Top