(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಮಹಿಳೆಯೋರ್ವರು ನದಿಗೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ.
ಮೃತರನ್ನು ಕೋಟೆಕಾರಿನ ಮಾಡೂರು ನಿವಾಸಿ ಶಾರದಾ ಗಟ್ಟಿ ಎಂದು ಗುರುತಿಸಲಾಗಿದೆ. ಇವರು ಮೂಲತಃ ಉಚ್ಚಿಲದ ಸಂಕೋಳಿ ನಿವಾಸಿಯಾಗಿದ್ದು, ಸದ್ಯ ಮಾಡೂರಿನಲ್ಲಿರುವ ಮಗಳ ಮನೆಯಲ್ಲಿ ವಾಸವಾಗಿದ್ದರು. ಕಳೆದ ಡಿ. 15ರಂದು ಉಚ್ಚಿಲ ಸಂಕೋಳಿಗೆಯ ತರವಾಡಿನ ಮನೆಗೆ ಸಂಕ್ರಾಂತಿ ಪೂಜೆಗೆ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಮನೆ ಮಂದಿಯೆಲ್ಲ ಶಾರದಾ ಅವರು ಬೇರೆ ಮಕ್ಕಳ ಮನೆಗೆ ತೆರಳಿರಬಹುದು ಎಂದು ಸುಮ್ಮನಿದ್ದು, ಇಂದು ಕೂಡಾ ಮನೆಗೆ ಹಿಂತಿರುಗದ ಹಿನ್ನೆಲೆ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ವೇಳೆ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾದ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಅಲ್ಲಿ ವಿಚಾರಿಸಿದಾಗ ಅದು ಶಾರದಾ ಗಟ್ಟಿ ಅವರ ಮೃತದೇಹ ಎಂದು ತಿಳಿದು ಬಂದಿದೆ.