ಸರಿಗಮಪ ಸೀಸನ್ 17ರ ಚಾಂಪಿಯನ್ ಆಗಿ ಹೊರಹೊಮ್ಮಿದ ಶ್ರೀನಿಧಿ ಶಾಸ್ತ್ರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.21: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪ ಚಾಂಪಿಯನ್ ಆಗಿ ಶ್ರೀನಿಧಿ ಶಾಸ್ತ್ರಿ ಹೊರಹೊಮ್ಮಿದ್ದಾರೆ. ಸರಿಗಮಪ ಸೀಸನ್ 17ರ ಫೈನಲ್ ನಲ್ಲಿ ಎರಡು ರೌಂಡ್ ಗಳಿದ್ದು ಅದರಲ್ಲಿ ಕಿರಣ್ ಪಾಟೀಲ್ ಮತ್ತು ಶರದಿ ಪಾಟೀಲ್ ಮೊದಲ ರೌಂಡ್ ನಲ್ಲಿ ಎಲಿಮಿನೆಟ್ ಆಗಿದರು. ಇನ್ನು ಫೈನಲ್ ರೌಂಡ್ ಗೆ ಶ್ರೀನಿಧಿ ಶಾಸ್ತ್ರಿ, ಅಶ್ವಿನ್ ಶರ್ಮ ಹಾಗೂ ಕಂಬದ ರಂಗಯ್ಯ ಎಂಟ್ರಿ ಕೊಟ್ಟಿದ್ದರು.

 

ಫೈನಲ್ ರೌಂಡ್ ನಲ್ಲಿ ಶ್ರೀನಿಧಿ ಶಾಸ್ತ್ರಿ ಆಡಿಯೆನ್ಸ್ ಓಟಿನ ಜೊತೆಗೆ ತೀರ್ಪುಗಾರರು ನೀಡಿದ ಅಂಕಗಳು ಎರಡನ್ನು ಪರಿಗಣನೆಗೆ ತೆಗೆದುಕೊಂಡು ಶ್ರೀನಿಧಿ ಶಾಸ್ತ್ರಿಯನ್ನು ಚಾಂಪಿಯನ್ ಆಗಿ ಘೋಷಿಸಿದರು. ನ್ನು ಅಶ್ವಿನ್ ಶರ್ಮ ಮೊದಲ ರನ್ನರ್ ಅಪ್ ಆಗಿದ್ದರೆ, ಕಂಬದ ರಂಗಯ್ಯ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.ಚಾಂಪಿಯನ್ ಆಗಿರುವ ಶ್ರೀನಿಧಿ ಶಾಸ್ತ್ರಿ ಅವರು 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. 1 ರನ್ನರ್ ಅಪ್ ಆಗಿರುವ ಅಶ್ವಿನ್ ಶರ್ಮ 5 ಲಕ್ಷ ಬಹುಮಾನ ಪಡೆದರೆ ಕಂಬದ ರಂಗಯ್ಯ 2.5 ಲಕ್ಷ ರುಪಾಯಿ ಬಹುಮಾನ ಪಡೆದಿದ್ದಾರೆ.

Also Read  ನೇಲ್ಯಡ್ಕ ಶಾಲೆಗೆ ಶಿಕ್ಷಕರಿಗಾಗಿ ಮೌನ ಪ್ರತಿಭಟನೆ

error: Content is protected !!
Scroll to Top