ಕಡಬ: ರಾಜ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ► ಹಿಂದೂ ಸಂಘಟನೆ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ,ಅ.11. ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವಹಿಂದು ಪರಿಷತ್ ಬಜರಂಗದಳವು ರಾಜ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ತಾಲೂಕಿನಾದ್ಯಂತ ಬುಧವಾರ ಪ್ರತಿಭಟನೆ ನಡೆಸಿತು.

ಕಡಬ ಬಸ್ ನಿಲ್ದಾನದ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಿಂದುಗಳ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ. ಹಿಂದು ಸಂಘಟನೆಯ ನಾಯಕರ, ಕಾರ್ಯಕರ್ತರ ಮೇಲೆ ಕೊಲೆ ಕೇಸುಗಳನ್ನು ಹಾಕಿಸಿ ಹಿಂದು ಚಳುವಳಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಾ ಬಂದಿದೆ. ಹಿಂದು ಕಾರ್ಯಕರ್ತನ ಕೊಲೆಯಾದಗ ಮೌನ ವಹಿಸುವ ಸರ್ಕಾರ ಯಾವುದೇ ಅನ್ಯಧರ್ಮದ ವ್ಯಕ್ತಿಯ ಕೊಲೆ ರಾಜ್ಯದಲ್ಲಿ ನಡೆದಾಗ ಸುಮ್ಮನೆ ಹಿಂದು ನಾಯಕರ, ಸಂಘಟನೆ ಕಾರ್ಯಕರ್ತರ ಮನೆಗೆ ನುಗ್ಗಿ ಸುಳ್ಳು ಕೇಸುಗಳನ್ನು ದಾಖಲಿಸಿ ಬಂಧಿಸುತ್ತಿದೆ. ಹಿಂದೂ ಸಮಾಜ ಒಗ್ಗಟ್ಟಾಗುವ ಮೂಲಕ ಮುಂದಿನ ಚುನಾವಣೆಯಲ್ಲಿ ಹಿಂದೂ ವಿರೋಧಿ ಸರ್ಕಾರಕ್ಕೆ ತಕ್ಕ ಉತ್ತರ ಕಲಿಸಬೇಕಾಗಿದೆ ಎಂದ ಅವರು ಹಿಂದೂ ವಿರೋಧಿ ನೀತಿ ಅನುಸರಿಸುವ ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.


ಹಿರಿಯ ಮುಖಂಡ ಗೋಪಾಲಕೃಷ್ಣ ರಾವ್ ಬಿಳಿನೆಲೆ ಮಾತನಾಡಿ ಈ ಹಿಂದೆ ಭಾರತದಿಂದ ಬ್ರಿಟಿಷರನ್ನು ಯಾವ ರೀತಿ ಹಿಮ್ಮೆಟ್ಟಿಸಿದೇವೆಯೋ ಅದೇ ರೀತಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಿಮ್ಮೆಟ್ಟುವ ತನಕ ನಮ್ಮ ಹೋರಾಟ ನಿಲ್ಲದು ಎಂದರು.
ಪ್ರತಿಭಟನೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಕೃಷ್ಣ ಶೆಟ್ಟಿ ಕಡಬ, ಜಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯ ರೈ, ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಸದಸ್ಯ ಸೀತರಾಮ ಗೌಡ ಪೊಸವಳಿಕೆ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್ ಗೆ ಧಿಕ್ಕಾರ ಹಾಕಿದರು.

Also Read  ಜನ ಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು - ಮುರಳಿಧರ್ ಪೈ ಬಿ

 ಕಡಬ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಸತೀಶ್ ನಾಯಕ್, ತಾಲೂಕು ಪಂಚಾಯಿತಿ ಸದಸ್ಯೆ ಪಿ ವೈ ಕುಸುಮಾ, ಎಪಿಎಂಸಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣೆ, ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಹಿಂಜಾವೇ ತಾಲೂಕು ಸಂಚಾಲಕ ವೆಂಕಟ್ರಮಣ ಕುತ್ಯಾಡಿ, ಸಹಸಂಚಾಲಕ ಪ್ರಮೋದ್ ರೈ ಕುಡಾಲ, ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುರೇಶ್ ದೇಂತಾರು, ಬಜರಂದಳ ಕಡಬ ಸಂಚಾಲಕ ಯತೀಶ್ ಹೊಸಮನೆ, ಸುರಕ್ಷಾ ಪ್ರಮುಖ್ ಸಂತೋಷ್ ಸುವರ್ಣ ಕೋಡಿಬೈಲು, ನಗರ ಸಂಚಾಲಕ ಪ್ರಮೋದ್ ಕುಮಾರ್ ರೈ ನಂದುಗುರಿ, ಕಡಬ ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್ ಕೆ, 102ನೇ ನೆಕ್ಕಿಲಾಡಿ ಬಿಜೆಪಿ ವಿಸ್ತಾರಕ ಉಮೇಶ್ ಶೆಟ್ಟಿ ಸಾಯಿರಾಂ, ಗ್ರಾ.ಪಂ.ಸದಸ್ಯರಾದ ಹರೀಶ್ ಕೋಡಂದೂರು, ಹರ್ಷಕೋಡಿ,ಪ್ರಮುಖರಾದ ಜಯರಾಮ ಆರ್ತಿಲ, ಲಕ್ಷ್ಮೀಶ ಬಂಗೇರ, ಅಣ್ಣು ಪಣೆಮಜಲು, ಮಂಜುನಾಥ ಶೆಟ್ಟಿ ನವಸುಮ, ಮಧುಸೂಧನ್ ಕೊಂಬಾರು, ಪ್ರಕಾಶ್ ಕೊಂಬಾರು, ಮೋನಪ್ಪ ಗೌಡ ನಾಡೋಳಿ, ಗಿರೀಶ್ ಎ.ಪಿ, ರಘುರಾಮ್ ನಾೖಕ್ ಕುಕ್ಕೆರೆಬೆಟ್ಟು, ಸತೀಶ್ ಎರ್ಕ, ಕಡಬ ಸಂಗಮ ಜೀಪು ಚಾಲಕ ಮಾಲಕ ಸಂಘದ ಅಧ್ಯಕ್ಷ ಸುರೇಶ್ ಕಡಬ, ಕಿಶನ್ ರೈ, ಕೃಷ್ಣಪ್ಪ ಮಡಿವಾಳ, ಸಂತೋಷ್ ರೈ ಮರ್ದಾಳ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಾಸುದೇವ ಗೌಡ ಕೊಲ್ಲೆಸಾಗು ಸ್ವಾಗತಿಸಿ, ಹಿಂ.ಜಾ.ವೇ.ಪುತ್ತೂರು ಜಿಲ್ಲಾ ಸಹಸಂಚಾಲಕ ಮೋಹನ್ ಕೊೖಲ ಮನವಿ ವಾಚಿಸಿ ವಂದಿಸಿದರು. ಮನವಿಯನ್ನು ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಮೂಲಕ ರಾಜ್ಯಪಾಲರಿಗೆ ನೀಡಲಾಯಿತು.

Also Read  ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ➤ 10. ಕೋಟಿ ದಂಡ ಕಟ್ಟಿದ ಶಶಿಕಲಾ

 

error: Content is protected !!
Scroll to Top