ರಾಷ್ಟ್ರೀಯ ಒಲಿಂಪಿಯಾಡ್ ನಲ್ಲಿ ಕಡಬದ ಪೋರನಿಗೆ ದ್ವಿತೀಯ ರ್‍ಯಾಂಕ್

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.18: ದೆಹಲಿಯ ಆರೆಂಜ್ ಗ್ಲೋಬಲ್ ಒಲಿಂಪಿಯಾಡ್ ಅವರು 2019-20 ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಯತಿನ್ ಬಿ.ಎಸ್ ರಾಷ್ಟ್ರ ಮಟ್ಟದ ವಿಜ್ಞಾನ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ರ್‍ಯಾಂಕ್ ಪಡೆದಿದ್ದಾನೆ. ಈ ಪ್ರಶಸ್ತಿ ರೂ. 40,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿದೆ.

 

 

ಇವರು ಕಡಬ ನಿವಾಸಿ ನಿವೃತ್ತ ಯೋಧ ಸೇಸಪ್ಪ ಗೌಡ ಮತ್ತು ಪುತ್ತೂರು ಠಾಣೆಯ ಮಹಿಳಾಪೊಲೀಸ್ ಹೇಮಾವತಿ ಇವರ ಪುತ್ರನಾಗಿದ್ದಾನೆ. ಇವರಿಗೆ ಕಂಪ್ಯೂಟರ್ ವಿಭಾಗದ ಶಿಕ್ಷಕ ರಾಜಶೇಖರ್.ಬಿ.ಸಿ ಇವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

Also Read  ಉಡುಪಿ :ಯಾವುದೇ ದಾಖಲೆಗಳಿಲ್ಲದೆ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ ಅಪರಿಚಿತರು.!?

error: Content is protected !!
Scroll to Top