ಮಂಗಳೂರು :ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟಕ್ಕೆ ಯತ್ನ ➤ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದುಬೈಗೆ ಸುಮಾರು 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಿಐಎಸ್ಎಫ್ ಅಧಿಕಾರಿಗಳು ಪತ್ತೆ ಮಾಡಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾಸರಗೋಡಿನ ಚಿತ್ತಾರಿಯ ಬಾರಿಕ್ಕಾಡ್‌‌‌ ನಿವಾಸಿ ತಾಜುದ್ದೀನ್‌‌ (39) ಎಂದು ಗುರುತಿಸಲಾಗಿದೆ.ಈತ ಡಿ.17ರ ಗುರುವಾರದಂದು ಸಂಜೆ 4.30 ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ತಪಾಸಣೆ ನಡೆಸಿದ ವೇಳೆ ಯುರೋಪಿಯನ್‌‌ ಕರೆನ್ಸಿ ಯೂರೊ ಹಾಗೂ ಯುಎಇ ದಿರಾಮ್‌‌‌‌ ಪತ್ತೆಯಾಗಿದೆ. ಈತ ಧರಿಸಿದ್ದ ಒಳ ಬಟ್ಟೆಯ ಒಳಗೆ ಅಡಗಿಸಿಟ್ಟುಕೊಂಡು ಕರೆನ್ಸಿಯನ್ನು ಸಾಗಿಸಲು ಯತ್ನಿಸಿದ್ದ. ಸಿಐಎಸ್ಎಫ್ ಅಧಿಕಾರಿ ದೇವೇಂದರ್ ಸಿಂಗ್ ಅವರು ಅಕ್ರಮ ಸಾಗಾಟ ಮಾಡುತ್ತಿದ್ದ ವಿದೇಶಿ ಕರೆನ್ಸಿಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಮುಂದಿನ ತನಿಖೆಗಾಗಿ ಕಸ್ಟಮ್ಸ್‌ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

Also Read  ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಆರೋಪಿ ಬಂಧನ

error: Content is protected !!
Scroll to Top