(ನ್ಯೂಸ್ ಕಡಬ) newskadaba.com ಸುಳ್ಯ, ಡಿ.18: ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ಶಿಕ್ಷಕರುಗಳಾದ ದೇವಚಳ್ಳ ಶ್ರೀಧರ ಗೌಡ ಕೆ (148) ನಡುಗಲ್ಲು ಶಾಲೆಯ ಕುಶಾಲಪ್ಪ ಟಿ (147), ಅಮೈಮಡಿಯಾರು ಶಾಲೆಯ ಪದ್ಮನಾಭ ಅತ್ಯಾಡಿ (128), ದೊಡ್ಡತೋಟ ಶಾಲೆಯ ಕುಶಾಲಪ್ಪ ಪಿ (125), ಬಿಳಿಯಾರು ಶಾಲೆಯ ಶೀಲಾವತಿ ಕೆ.ಎನ್. (147), ಕರಿಕ್ಕಳ ಶಾಲೆಯ ಸರೋಜಿನಿ (137) ಮತಗಳನ್ನು ಪಡೆದು ನಿರ್ದೇಶಕರುಗಳಾಗಿ ಆಯ್ಕೆಯಾದರು.
ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಸಂಧ್ಯಾ ರಶ್ಮಿಯಲ್ಲಿ ಚುನಾವಣೆ ಬೆಳಗ್ಗೆ 7.30 ಕ್ಕೆ ಆರಂಭಗೊಂಡಿದ್ದು ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. 289 ಮಂದಿ ಮತದಾರರಲ್ಲಿ 249 ಮಂದಿ ಮತ ಚಲಾಯಿಸಿದ್ದರು. ಗುತ್ತಿಗಾರು ಶಾಲೆಯ ಶಶಿಧರ್ ಮಾವಿನಕಟ್ಟೆ (119), ಕೋಲ್ಚಾರು ಶಾಲೆಯ ಜಲಜಾಕ್ಷಿ ಡಿ (133), ಮಡಪ್ಪಾಡಿ ಶಾಲೆಯ ಚಂದ್ರಶೇಖರ ಪಿ(94), ಕೂತ್ಕುಂಜ ಶಾಲೆಯ ಚಂದ್ರಶೇಖರ ಕೆ(62), ಜಯನಗರ ಶಾಲೆಯ ತೀರ್ಥರಾಮ ಎ.ವಿ.(116), ಪೇರಾಲು ಶಾಲೆಯ ಸುನಂದ ಜಿ (59) ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಸಿ.ಎ. ಕಾರ್ಯನಿರ್ವಹಿಸಿದರು. ಮತ ಎಣಿಕೆಯು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಉಪಸ್ಥಿತರಿದ್ದರು.