ಅರೆಭಾಷೆಯ ಕಾರ್ಯಕ್ಷಮತೆ ಹೆಚ್ಚಾಗಬೇಕು ➤ ಉಪನ್ಯಾಸಕಿ ಸ್ವರ್ಣಲತಾ ಕಿಶೋರ್

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.18: ಅರೆಭಾಷೆಯ ಕಲಾ ಚಟುವಟಿಕೆಗಳು ಹವ್ಯಾಸ ಮಾತ್ರವಾಗದೆ, ಕಲಾವಿದರ ಜೀವನೋಪಾಯ ಮಾರ್ಗವೂ ಆಗಬೇಕು. ಅರೆಭಾಷೆ ಅನ್ನದ ಭಾಷೆಯಾಗುವುದೊಂದಿಗೆ ಭಾಷೆಯ ಕಾರ್ಯಕ್ಷಮತೆ ಕೂಡ ಹೆಚ್ಚಾಗಬೇಕು ಎಂದು ಶ್ರೀ ಶಾರದಾ ಮಹಿಳಾ ಪ.ಪೂ. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಸ್ವರ್ಣಲತಾ ಕಿಶೋರ್ ಹೇಳಿದರು.

ಕರ್ನಾಟಕ ಸರ್ಕಾರವು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ, ಆದೇಶ ಹೊರಡಿಸಿದ ನೆನಪಿಗಾಗಿ ಸುಳ್ಯದ ರೋಟರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಅರೆಭಾಷೆ ದಿನಾಚರಣೆ ಮತ್ತು ಅರೆಭಾಷೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳ ಕಲಿಕೆಯ ಸಾಮರ್ಥ್ಯ ಹೆಚ್ಚು. ಮಕ್ಕಳಿಗೆ ಕಥೆ ಹೇಳುವ ಮೂಲಕ ಭಾಷಾ ವಿಸ್ತಾರತೆಯ ಕಾರ್ಯ ಪರಿಣಾಮಕಾರಿ. ಅರೆ ಭಾಷೆಯ ಮೇಲೆ ಭಾವನಾತ್ಮಕ ಅಭಿಮಾನ ಬೇಕು ನಿಜ. ಆದರೆ ಅರೆಭಾಷೆಯು ಲಾಭ ತರುವ ಭಾಷೆಯೂ ಆಗಬೇಕು ಎಂದು ಹೇಳಿದರು.

Also Read  ಬೆಳ್ತಂಗಡಿ: ಸಿಡಿಲು ಬಡಿಯುತ್ತಿದ್ದ ವೇಳೆ ವಿದ್ಯುತ್ ಫ್ಯೂಸ್ ತೆಗೆಯಲು ಹೋದ ಮಹಿಳೆ ➤ ವಿದ್ಯುತ್ ಆಘಾತಕ್ಕೊಳಗಾಗಿ ಪತಿ - ಪತ್ನಿ ಸ್ಥಳದಲ್ಲೇ ಮೃತ್ಯು

ರೋಟರಿ ವಿದ್ಯಾ ಸಂಸ್ಥೆಯ ಸಂಚಾಲಕ ಜಿತೇಂದ್ರ ಎನ್. ಎ. ಕಾರ್ಯಕ್ರಮ ಉದ್ಘಾಟಿಸಿ ಭಾಷೆ ಮತ್ತು ಸಂಸ್ಕೃತಿ ಒಂದು ಜನಾಂಗಕ್ಕೆ ಅಡಿಪಾಯ. ಜನಾಂಗದ ಸಂಸ್ಕೃತಿ ಬದಲಾಗಿ ಮಿಶ್ರ ಸಂಸ್ಕೃತಿ ಬಂದಿದೆ. ಭಾಷೆಯ ಮೇಲಿನ ಪ್ರಾಮಾಣಿಕ ಪ್ರೀತಿಯಿಂದ ಭಾಷೆಯನ್ನು ಬೆಳೆಸಬೇಕು. ಉಳಿದ ಭಾಷೆಯ ಒಳ್ಳೆಯ ಅಂಶಗಳನ್ನು ಸೇರಿಸಿ ಭಾಷೆ ಬೆಳೆಸಬೇಕು ಎಂದು ಅವರು ಹೇಳಿದರು.

error: Content is protected !!
Scroll to Top