(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18: ಕಾಪು ಠಾಣಾ ವ್ಯಾಪ್ತಿಯ ಮಲ್ಲಾರು ಕೋಟೆ ಎಂಬಲ್ಲಿ ಮನೆಗಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಕಳ್ಳರನ್ನು ಕಾಪು ಪೊಲೀಸರು ಗುರುವಾರ ಬಂಧಿಸಿದ್ದಾರೆ.ಬಂಧಿತರನ್ನು ಮಲ್ಲಾರು ನಿವಾಸಿ ಅಬ್ದುಲ್ ಸತ್ತಾರ್ (38) ಮತ್ತು ಕುತ್ಯಾರು ನಿವಾಸಿ ಅಬ್ದುಲ್ ರಹಮಾನ್ ಪುದಿನ್ ಯಾನೆ ರಹೀಂ (49) ಎಂದು ಗುರುತಿಸಲಾಗಿದೆ.
2012ರ ಜುಲೈ ನಲ್ಲಿ ಮಲಾರು ಗ್ರಾಮದ ಕೋಟೆ ಎಂಬಲ್ಲಿರುವ ಪರ್ವಿನ್ ಬಾಬು ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹಿಂದಿನ ಬಾಗಿಲನ್ನು ಮುರಿದು ಮನೆಯ ಗೋದ್ರೇಜ್ ನಲ್ಲಿ ಇರಿಸಿದ್ದ ಸುಮಾರು 2 ಲಕ್ಷ ರೂ, 50,000 ಮೌಲ್ಯದ ಬಾಕ್ಸ್ ಪಾತ್ರೆ ಪರಿಕರಗಳು, ನಳ್ಳಿ ನೀರಿನ ಬೀಗ ಡೋರ್ ಲಾಕ್ ಕಳವು ಮಾಡಿಕೊಂಡು ಹೋದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿಯವರು ಸದ್ಯಕ್ಕೆ ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ‘ಸಿ’ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದರು.ಪ್ರಕರಣ ದಾಖಲಾಗಿ 08 ವರ್ಷ ಕಳೆದಿದ್ದು, ಪ್ರಸ್ತುತ ಸದ್ರಿ ಪ್ರಕರಣದ ಆರೋಪಿಗಳ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಆಬುಲ್ ಸತ್ತಾರ್, (36), ಎಂಬವನನ್ನು ಸಿಪಿಐ ಕಾಪು ವಿಚಾರಣೆ ನಡೆಸಿದ್ದು, ಆತನು ತನ್ನ ತಪ್ಪನ್ನು ಒಮ್ಮೆ ತಾನು ಹಾಗೂ ಅಬುಲ್ ರೆಹಮಾನ್ ಪಕ್ರುದ್ದೀನ್ ಯಾನೆ ರಹೀಂ ಎಂಬವರು ಇನ್ನಿಬ್ಬರು ಆರೋಪಿಗಳ ಜೊತೆ ಸೇರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ಧಾನೆ ಪ್ರಕರಣಕ್ಕೆ ಸಂಬಂಧಿಸಿದ ಕಳವು ಮಾಡಿದ ಸೊತ್ತುಗಳಾದ ಚಿನ್ನದ ನೆಕ್ಸಸ್ ಹಾಗೂ ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಅಂದಾಜು ಮೌಲ್ಯ ರೂ. 1,92,000/ ಆಗಿರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.