ಸುಳ್ಯ :ಚೆಕ್ ಬೌನ್ಸ್ ಪ್ರಕರಣದಲ್ಲಿ ವಾರಂಟ್ ಆಗಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.18: ಚೆಕ್ ಬೌನ್ಸ್ ಪ್ರಕರಣದಲ್ಲಿ ವಾರಂಟ್ ಆಗಿದ್ದ ಆರೋಪಿಯನ್ನು ಸುಳ್ಯ ಎಸ್ ಐ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಡಪ್ಪಾಡಿ ಗ್ರಾಮದ ಪ್ರತೀಕ್ ಎಂಬಾತ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು ಈತನ ಮೇಲೆ 12 ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು.

ಬಳಿಕ ಆತ ತಲೆ ಮರೆಸಿಕೊಂಡಿದ್ದ. ಕೆಲ ಸಮಯದಿಂದ ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ಡಿ.16 ರಂದು ಮಗಳೂರಿನಲ್ಲಿ ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Also Read  ಪ್ರಾಣಕ್ಕೆ ಕಂಟಕವಾದ ಮೀನು ಸಾಗಾಟದ ಲಾರಿ - ಮೀನಿನ ಬಾಕ್ಸ್ ಬಿದ್ದು ಸ್ಕೂಟರ್ ಸವಾರ ಮೃತ್ಯು..!

error: Content is protected !!
Scroll to Top