ಮೂಡುಬಿದಿರೆ: ಫೇಸ್ ಬುಕ್ ನಲ್ಲಿ ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ➤ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಡಿ.18: ಜೈನ ಧರ್ಮದ ಬಗ್ಗೆ ಹಾಗೂ ಜೈನ ಮುನಿ ಪರಂಪರೆಯ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಗಳು ಹರಿದಾಡುತ್ತಿದ್ದು, ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಮೂಡುಬಿದಿರೆ ಜೈನ್ ಮಿಲನ್ ಹಾಗೂ ಜೈನ ಯುವ ಸೇನೆಯ ಪದಾಧಿಕಾರಿಗಳು ದೂರು ನೀಡಿದರು.

ವಾಣಿಶ್ರೀ ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ಜೈನಮುನಿಗಳ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮೂಡುಬಿದಿರೆ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷೆ,ನಿರ್ದೇಶಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Also Read  ಎಣ್ಣೆ ಹೊಡೆದು ಬಂದ ಚುನಾವಣಾ ಸಿಬ್ಬಂದಿ ಸಸ್ಪೆಂಡ್

error: Content is protected !!