ಉಜಿರೆ :ಆಟವಾಡುತ್ತಿದ್ದ 8 ವರ್ಷದ ಮಗುವಿನ ಅಪಹರಣ ➤ 17 ಕೋ.ರೂ. ಬೇಡಿಕೆಯಿಟ್ಟ ಅಪಹರಣಕಾರರು

(ನ್ಯೂಸ್ ಕಡಬ) newskadaba.com ಉಜಿರೆ, ಡಿ.18: ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಅಪಹರಣ ನಡೆಸಿದ ಘಟನೆ ಉಜಿರೆಯಲ್ಲಿ ನಡೆದಿದೆ.

 

ಉಜಿರೆ ಉದ್ಯಮಿಯೋರ್ವರ 8 ವರ್ಷದ ಮಗು  ಸಂಜೆ 6.30ರ ಸುಮಾರಿಗೆ ಉಜಿರೆ ರಥಬೀದಿ ಸಮೀಪ ಆಟವಾಡುತ್ತಿರುವ ಸಂದರ್ಭ ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಅಪಹರಿಸಿದ ಕುರಿತು ಮಾಹಿತಿ ಲಭ್ಯವಾಗಿದೆ. ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದು, ಮನೆ ಮಂದಿ ಕಾರಿನ ಬಳಿ ಬಂದಂತೆ ಪರಾರಿಯಾಗಿದ್ದಾರೆ. ಬಳಿಕ ಮಗುವಿನ ತಾಯಿಗೆ ಕರೆ ಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಸ್ಥಳೀಯರ ಹೇಳಿಕೆಯಂತೆ ಅಪಹರಣಕಾರರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರೆಂದು ಹೇಳಲಾಗಿದೆ ಅಲ್ಲದೆ ಚಾರ್ಮಾಡಿ ರಸ್ತೆಯಾಗಿ ತೆರಳಿರುವ ಕುರಿತು ಮಾಹಿತಿ ರವಾನೆಯಾಗುತ್ತಿದೆ. ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ಮಗು ಅಪಹರಣ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಲಾರಂಬಿಸಿದೆ.

Also Read  ಐತ್ತೂರು: ಮಕ್ಕಳ ವಿಶೇಷ ಗ್ರಾಮ ಸಭೆ ► ಸಮಾಜದಲ್ಲಿನ ಹಾಗು ಹೋಗುಗಳನ್ನು ಜನಪ್ರತಿನಿಧಿಗಳ ಮುಂದಿಡುವ ಉತ್ತಮ ವೇದಿಕೆ- ವಿದ್ಯಾರ್ಥಿ ನಾಯಕ ಹಾರೀಶ್

 

 

 

error: Content is protected !!
Scroll to Top