ಭಾರತದ ಗಡಿಯೊಳಗೆ ಉಗ್ರರಿಂದ ನುಸುಳಲು ಯತ್ನ ➤ ಇಬ್ಬರು ಶಂಕಿತ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

(ನ್ಯೂಸ್ ಕಡಬ) newskadaba.com ಅಮೃತಸರ್, ಡಿ.17: ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಇಬ್ಬರು ಶಂಕಿತ ಉಗ್ರರನ್ನು ಭಾರತೀಯ ಸೇನೆ ಗುರುವಾರ ಹೊಡೆದುರುಳಿಸಿದೆ. ಗಡಿ ಭದ್ರತಾ ಪಡೆಯ ಯೋಧರು ಗುರುವಾರ ಮುಂಜಾನೆ ಪಂಜಾಬ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

 

ಇಂದು ಮುಂಜಾನೆ 2.30 ರ ಸುಮಾರಿಗೆ ಅಟಾರಿಯ ಮುಂಭಾಗದಲ್ಲಿ ಶಸ್ತ್ರಸಜ್ಜಿತವಾಗಿ ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸೈನಿಕರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಶೋಧ ನಡೆಸಿದ ಯೋಧರು ಘಟನಾ ಸ್ಥಳದಲ್ಲಿ ಒಂದು ಎಕೆ 56 ರೈಫಲ್, 61 ಸುತ್ತಿನ ಸಡೀವ ಗುಂಡುಗಳ 2 ಮ್ಯಾಗಜಿನ್, ಒಂದು ಮ್ಯಾಗ್ನಮ್ ರೈಫಲ್ ಮತ್ತು 29 ಸುತ್ತಿನ ಗುಂಡುಗಳು, ಒಂದು ಪಿಸ್ತೂಲ್ ಮತ್ತು ಎರಡು ಮ್ಯಾಗಜಿನ್ ಗಳು, 2 ಪಿವಿಸಿ ಪೈಪ್ ಗಳು, ಪಾಕಿಸ್ತಾನದ 30 ರೂಗಳ ನೋಟುಗಳನ್ನು ಸೇನೆ ವಶಕ್ಕೆ ಪಡೆದಿದೆ.

Also Read  ಭೂಮಿಗೆ ಬೀಳಲಿದೆ 38 ವರ್ಷ ಹಳೆಯ ನಾಸಾ ಉಪಗ್ರಹ !

error: Content is protected !!
Scroll to Top