ರಣರಂಗವಾಗಿದ್ದ ವಿಧಾನಪರಿಷತ್ ➤ ಕಾಂಗ್ರೆಸ್ ಕ್ಷಮೆ ಯಾಚನೆಗೆ ನಳೀನಕುಮಾರ ಕಟೀಲ್ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17: ವಿಧಾನ ಪರಿಷತ್ ನಲ್ಲಿ ತಳ್ಳಾಟ ನೂಕಾಟ ವಿಚಾರಕ್ಕೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

 

ಈ ಹಿಂದೆ ಕಾಂಗ್ರೆಸ್ ವಿಧಾನ ಸಭೆ, ವಿಧಾನ ಪರಿಷತ್ ನ ಹೊರಗೆ ಗೂಂಡಾಗಿರಿ ಮಾಡುತ್ತಿತ್ತು. ಈಗ ಒಳಗೂ ಗುಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಿದರು. ಇದು ರಾಜ್ಯದ ಜನತೆಗೆ ಅವಮಾನ ಮಾಡಿದಂತಾಗಿದೆ. ಅಲ್ಲದೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.ವಿಧಾನ ಪರಿಷತ್ ಇತಿಹಾಸ ಪರಂಪರೆಗೆ ಕಳಂಕ ತಂದಿದೆ. ಈ ಬಗ್ಗೆ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದರು. ಕಾಂಗ್ರೆಸ್ ರಾಜ್ಯಾಧ್ಯಕ್ಷ, ಹಿಂದೆ ಮುಖ್ಯಮಂತ್ರಿಯಾಗಿದ್ದವರು ಕ್ಷಮೆಯಾಚಿಸಬೇಕೆಂದು ಕಟೀಲ್ ಒತ್ತಾಯಿಸಿದರು.

Also Read  ಸಂಪ್‌ನಲ್ಲಿ ಉದ್ಯಮಿ ಪುತ್ರನ ಮೃತದೇಹ ಪತ್ತೆ.!

 

error: Content is protected !!
Scroll to Top