ಕಾಡು ಹಂದಿ ದಾಳಿಗೆ ಒಳಗಾದ ವ್ಯಕ್ತಿ ಮೃತ್ಯು .!

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ.17: ಕಾಡು ಹಂದಿ ದಾಳಿಗೆ ಒಳಗಾದ ವ್ಯಕ್ತಿಯೊರ್ವರು ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ನೀರ್ಚಾಲು ಸಮೀಪದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪುದುಕ್ಕೋಳೀಯ ಐತಪ್ಪ ನಾಯ್ಕ್ ( 46) ಎಂದು ಗುರುತಿಸಲಾಗಿದೆ.

ಮನೆ ಸಮೀಪದ ಕಾಡಿಗೆ ತೆರಳಿದ್ದ ಸಂದರ್ಭದಲ್ಲಿ ಹಂದಿ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಐತಪ್ಪ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

 

 

Also Read  ಅಬಕಾರಿ ಡಿವೈಎಸ್ಪಿಯಾಗಿ ಗಾಯತ್ರಿ ಸಿ.ಹೆಚ್ ನೇಮಕ

error: Content is protected !!
Scroll to Top