ಹೆಂಡತಿಗಾಗಿ ತೆಂಗಿನ ಮರವೇರಿ ಕುಳಿತ ಗಂಡ.!

(ನ್ಯೂಸ್ ಕಡಬ) newskadaba.com ಹೊಸಹಳ್ಳಿ, ಡಿ.17: ತನ್ನ 2ನೇ ಹೆಂಡತಿ ತವರು ಮನೆ ಸೇರಿದ್ದಕ್ಕೆ ಪತಿರಾಯ ಮರವೇರಿ ಪ್ರತಿಭಟನೆ ನಡೆಸುತ್ತಿದ್ದ ಘಟನೆ ನಗರದಲ್ಲಿ ಜರುಗಿದೆ.ಪತ್ನಿಯರು ಬೇಕೆಂದು ತೆಂಗಿನ ಮರವೇರಿ ಕುಳಿತು ಪ್ರತಿಭಟಿಸುತ್ತಿದ್ದ ಈತ ಮೊದಲ ಹೆಂಡತಿ ಮುಖ ನೋಡಿ ಮರದಿಂದ ಇಳಿದು ಬಂದಿದ್ದಾನೆ. ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಸಮೀಪದ ದಾಸೋಬನಹಳ್ಳಿ ಗ್ರಾಮದ ಗೊಲ್ಲರಹಟ್ಟಿ ನಿವಾಸಿ ದೊಡ್ಡಪ್ಪ (40). ಈ ಕೃತ್ಯ ಎಸಗಿದ ಆಸಾಮಿ. . ಇಬ್ಬರು ಪತ್ನಿಯರ ಪೈಕಿ ಒಬ್ಬರು ನನ್ನೊಂದಿಗೆ ಜೀವನ ಮಾಡುತ್ತಿಲ್ಲ ಆಕೆ ವಾಪಸ್ ಬರಬೇಕು ಎಂದು ಪ್ರತಿಭಟನೆ ನಡೆಸಿದ್ದಾನೆ.

 

 

ಓರ್ವ ಹೆಂಡತಿ ತನ್ನನ್ನು ಬಿಟ್ಟು ಹೋಗಿದ್ದರು ಗ್ರಾಮಸ್ಥರು ಪಂಚಾಯಿತಿ ಮಾಡಿಸಲು ಮುಂದೆ ಬಂದಿಲ್ಲ ಮತ್ತು ಮೂವರು ಮಕ್ಕಳ ಪೋಷಣೆಯಿಂದ ಬೇಸತ್ತು ಹೋಗಿದ್ದೇನೆ ಎಂದು ದೊಡ್ಡಪ್ಪ ಆರೋಪಿಸಿದ್ದಾನೆ. ವಿಚಿತ್ರ ಎಂದರೆ ಈತ ಸುಮಾರು ಎಂಟು ಗಂಟೆಗಳ ಕಾಲ ಮರದಲ್ಲೇ ಕೂತು ಪ್ರತಿಭಟನೆ ನಡೆಸಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೇರೆ ದಾರಿ ಕಾಣದ ಪೊಲೀಸರು ಮೊದಲ ಹೆಂಡತಿಯನ್ನು ಸ್ಥಳಕ್ಕೆ ಕರೆಸಿದ್ದಾರೆ.ನಂತರ ಅಂತಿಮವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ದೊಡ್ಡಪ್ಪನನ್ನು ಮರದಿಂದ ಕೆಳಗಿಳಿಸಲಾಗಿದೆ.

Also Read  ಪುತ್ತೂರು: ಯುವತಿಗೆ ಚೂರಿಯಿಂದ ಇರಿದು ಬರ್ಬರ ಕೊಲೆ

 

error: Content is protected !!
Scroll to Top