ಬಾಳಿಲದಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್

(ನ್ಯೂಸ್ ಕಡಬ) newskadaba.com ಬಾಳಿಲ, ಡಿ.17: ಒಂದು ಕಡೆ ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ದತೆಗಳು ಬರದಿಂದ ಸಾಗುತ್ತಿದೆ. ಮತ್ತೊಂದು ಕಡೆ ಪುತ್ತೂರು, ಸುಳ್ಯ, ಕಡಬ ವ್ಯಾಪ್ತಿಯ ಹಲವು ಭಾಗಗಳಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಗಳು ರಾರಾಜಿಸುತ್ತಿದೆ. ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್ ಆಳವಡಿಸುವ ಮೂಲಕ ಈ ಭಾರಿ ಚುನಾವಣೆ ಬಹಿಷ್ಕರಿಸಿದ್ಧಾರೆ.

 

 

ಬಾಳಿಲ 2ನೇ ವಾರ್ಡ್ ನಲ್ಲಿ ಕೆಲವು ವರುಷಗಳಿಂದ ನಮ್ಮ ವಾರ್ಡ್‍ನ ಪಂಚಾಯತ್ ಸದಸ್ಯರಿಂದ ಹಿಡಿದು ವಿಧಾನ ಸಭಾ ಸದಸದ್ಯವರೆಗೆ ನಮ್ಮ ಪ್ರಮುಖ ಬೇಡಿಕೆಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ದಾರಿದೀಪ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಭರವಸೆ ಮಾತ್ರ ನೀಡುತ್ತಿರುವ ಜನಪ್ರತಿನಿಧಿಗಳ ಧೋರಣೆಗೆ ಬೇಸತ್ತು ಮುಂದಿನ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕೊಡೆಂಕಿರಿ,ಮರೆಂಗಾಲ, ಪಲ್ಲತ್ತಡ್ಕ ಮತ್ತು ಕಾಪುತ್ತಡ್ಕ ಗ್ರಾಮಸ್ಥರು ವ್ಯಾನರ್ ಅಳವಡಿಸಿದ್ದಾರೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತೋಟಗಾರಿಕೆ ಇಲಾಖೆ ➤ ಗುತ್ತಿಗೆ ಆಧಾರದಲ್ಲಿ ಸೇವೆ

 

error: Content is protected !!
Scroll to Top