ಮರ್ದಾಳ: ಶ್ರೀಮಹಾಲಿಂಗೇಶ್ವರ ದೇವಸ್ಥಾನ ► ಹುಂಡಿ ಅಕ್ಕಿ ಸಮರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ಮರ್ದಾಳ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನಕ್ಕೆ ಹುಂಡಿ ಅಕ್ಕಿ ಸಮರ್ಪಣೆ ಹಾಗೂ ಜೀರ್ಣೋದ್ಧಾರದ ಕುರಿತ ಭಕ್ತಾಧಿಗಳ ಸಭೆ ನಡೆಯಿತು.

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪ್ರತಿ ಮನೆಯಲ್ಲಿ ಪ್ರತಿ ದಿನ ಒಂದು ಹುಂಡಿ ಅಕ್ಕಿ ಸಂಗ್ರಹಿಸಿ ತಿಂಗಳ ಹುಣ್ಣಿಮೆಯಂದು ದೇವಸ್ಥಾನಕ್ಕೆ ಸಮರ್ಪಿಸಲು ತಿರ್ಮಾನಿಸಲಾಗಿದ್ದು ಅದರಂತೆ ಮೊದಲ ತಿಂಗಳ ಹುಂಡಿ ಅಕ್ಕಿಯನ್ನು ಜೀರ್ಣೋದ್ಧಾರದ ಕುರಿತ ಭಕ್ತಾಧಿಗಳ ಸಭೆಯಲ್ಲಿ ಸಮರ್ಪಣೆ ಮಾಡಲಾಯಿತು. ಬಳಿಕ ನಡೆದ ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಚರ್ಚಿಸಲಾಯಿತು.

Also Read  ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಲ್ಲಿ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯಡಿ ಸಿರಿ ಸಂಸ್ಥೆಯ ಮಳಿಗೆ ಉದ್ಘಾಟನೆ

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮೋಕ್ತೆಸರರಾದ ಸನತ್ ಕುಮಾರ್ ಜೈನ್, ಹಾಗೂ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಕೈಕುರೆ ಸೇರಿದಂತೆ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.

error: Content is protected !!
Scroll to Top