ಮಂಗಳೂರಿನಲ್ಲಿ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಪ್ರಕರಣ ➤ ಓರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17: ಕರ್ತವ್ಯದಲ್ಲಿದ್ದ ಹೆಡ್‌‌ ಕಾನ್ಸ್‌ಟೇಬಲ್‌ಯೋರ್ವರ ಮೇಲೆ ದುಷ್ಕರ್ಮಿಯೋರ್ವ ತಲವಾರಿನಿಂದ ಹಲ್ಲೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಕುದ್ರೋಳಿಯ ನವಾಜ್ (21) ಎಂದು ತಿಳಿದು ಬಂದಿದೆ. ಮತ್ತೊಬ್ಬ16 ವರ್ಷದ ಬಾಲಕ ಎಂದು ತಿಳಿದು ಬಂದಿದ್ದು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ

ಕಳೆದ ದಿನ ಮಂಗಳೂರಿನ ರಥಬೀದಿಯ ಬಳಿಯ ನ್ಯೂ ಚಿತ್ರಾ ಟಾಕೀಸ್‌ ಮುಂಭಾಗದಲ್ಲಿ ಈ ಘಟನೆ ನಡೆದಿತ್ತು.ಬಂದರು ಠಾಣೆಯ ಹೆಡ್‌‌ ಕಾನ್ಸ್‌ಟೇಬಲ್‌‌‌ ಗಣೇಶ್‌‌ ಕಾಮತ್‌ ಹಾಗೂ ಇಬ್ಬರು ಸಿಬ್ಬಂದಿ ತಪಾಸಣೆ ನಿರತರಾಗಿದ್ದರು. ಈ ಸಂದರ್ಭ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೋರ್ವ ಮುಖ್ಯ ಪೇದೆ ಗಣೇಶ್‌ ಕಾಮತ್‌ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.

Also Read  ಮಂಗಳೂರು ಗೋಲಿಬಾರ್ ➤ ಸೆಪ್ಪೆಂಬರ್ 1 ರಂದು ಅಂತಿಮ ವಿಚಾರಣೆ

error: Content is protected !!
Scroll to Top